ಗುಡಿಸಲು ರೀತಿಯ ಶಾಲೆಗೆ ಬೆಂಕಿ: 26 ಮಕ್ಕಳು ಸಜೀವ ದಹನ

masthmagaa.com:

ಆಫ್ರಿಕಾ ಖಂಡದ ನೈಜರ್​ ದೇಶದ ಶಾಲೆಯೊಂದರ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿ 26 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಬಡ ದೇಶವಾದ ನೈಜರ್​​ನಲ್ಲಿ ಶಾಲಾ ಕೊಠಡಿಗಳ ಕೊರತೆಯನ್ನ ನೀಗಿಸಲು ಕೆಲವೊಂದುಕಡೆ ಮರ ಮತ್ತು ಹುಲ್ಲಿನಿಂದ ಗುಡಿಸಲು ರೀತಿಯ ಕೊಠಡಿಗಳನ್ನ ನಿರ್ಮಿಸಲಾಗುತ್ತೆ. ಇಂಥಾ ಶಾಲೆಯಲ್ಲೇ ಬೆಂಕಿ ಅವಘಡ ಸಂಭವಿಸಿ ಇಷ್ಟು ಮಕ್ಕಳು ಪ್ರಾಣ ಕಳ್ಕೊಂಡಿದ್ದಾರೆ.

-masthmagaa.com

Contact Us for Advertisement

Leave a Reply