masthmagaa.com:

ಟೀಂ ಇಂಡಿಯಾ ವಿರುದ್ಧ 2ನೇ ಟೆಸ್ಟ್ ಸೋತಿರುವ ಆಸ್ಟ್ರೇಲಿಯಾಗೆ ಡಬಲ್ ಶಾಕ್ ಆಗಿದೆ. ಮೊದಲನೇದಾಗಿ ಪಂದ್ಯವನ್ನ ಸೋತಿದ್ದು.. ಇನ್ನೊಂದು ವಿಚಾರ ಅಂದ್ರೆ ಸ್ಲೋ ಓವರ್-ರೇಟ್​ ಹಿನ್ನೆಲೆ ಆಸ್ಟ್ರೇಲಿಯಾ ತಂಡಕ್ಕೆ ಮ್ಯಾಚ್​ ಫೀಸ್​ನ 40% ದಂಡ ಹಾಕಿದೆ ಐಸಿಸಿ. ಇದರ ಜೊತೆಗೆ ಐಸಿಸಿ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್​ನ ಪಾಯಿಂಟ್ಸ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡಕ್ಕೆ 4 ಪಾಯಿಂಟ್​ಗಳನ್ನ ಕಟ್​​ ಮಾಡಲಾಗಿದೆ. ಟೀಂ ಇಂಡಿಯಾಗೆ ಇದು ಒಳ್ಳೆಯ ವಿಚಾರ. ಯಾಕಂದ್ರೆ ಈ ಪಾಯಿಂಟ್ಸ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ರೆ, ಭಾರತ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಅವರ ಪಾಯಿಂಟ್ಸ್ ಕಮ್ಮಿಯಾದ್ರೆ ನಮಗೆ ಒಳ್ಳೇದು. ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿ ಉಳಿದುಕೊಳ್ಳುವ ತಂಡಗಳು ಮುಂದಿನ ವರ್ಷ ನಡೆಯಲಿರುವ ಫೈನಲ್​ ಪಂದ್ಯವನ್ನ ಆಡಲಿವೆ.

-masthmagaa.com

Contact Us for Advertisement

Leave a Reply