ಆಸ್ಟ್ರೇಲಿಯಾದಲ್ಲಿ ಮೂರು ದಿನಗಳಿಂದ ಕೊರೋನಾ ದಾಖಲೆ ಮೇಲೆ ದಾಖಲೆ!

masthmagaa.com:

ಆಸ್ಟ್ರೇಲಿಯಾದಲ್ಲಿ ಸತತವಾಗಿ ಮೂರು ದಿನಗಳಿಂದ ಕೊರೋನಾ ಏರಿಕೆಯಾಗುತ್ತಿದೆ. ಇವತ್ತು ಒಂದೇ ದಿನ 4017 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದೆ. ನಿನ್ನೆಯಷ್ಟೇ ಆಸ್ಟ್ರೇಲಿಯಾದ ಕೊರೊನಾ ಇತಿಹಾಸದಲ್ಲೇ ಅತಿ ಹೆಚ್ಚು ಅಂದ್ರೆ 3820 ಮಂದಿಗೆ ಸೋಂಕು ಅಂಟಿತ್ತು. ಇವತ್ತು ಆ ದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದೆ ಕೊರೋನಾ.. ಹೀಗಾಗಿ ದೇಶದಾದ್ಯಂತ ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಇಡಬೇಕು ಅಂತ ಪ್ರಧಾನಿ ಸ್ಕಾಟ್ ಮಾರಿಸನ್ ಸೂಚಿಸಿದ್ದಾರೆ. ಇಂದು ಪತ್ತೆಯಾದ ಪ್ರಕರಣಗಳಲ್ಲಿ ನ್ಯೂ ಸೌತ್ ವೇಲ್ಸ್​ನಲ್ಲಿ ಅತಿಹೆಚ್ಚು ಅಂದ್ರೆ 2482 ಮಂದಿಗೆ ಸೋಂಕು ಮಂದಿಗೆ ಸೋಂಕು ತಗುಲಿದೆ. ಆದ್ರೆ ಇಲ್ಲಿ ಸೋಂಕಿತರ ಸಂಖ್ಯೆಯಲ್ಲಿನ ಹೆಚ್ಚಳ ಆಸ್ಪತ್ರೆಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 26 ಮಂದಿ ಮಾತ್ರ ಐಸಿಯುನಲ್ಲಿದ್ದಾರೆ ಅಂತ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply