2ನೇ ಬಾರಿಗೆ ಬಾಹ್ಯಾಕಾಶಕ್ಕೆ ಹೋಗಿ ಬಂದ ಬ್ಲೂ ಬೆಜೋಸ್ ನೌಕೆ! ಹೊಸ ದಾಖಲೆ

masthmagaa.com:

ಜೆಫ್ ಬೆಜೋಸ್​ರ ಬ್ಲೂ ಒರಿಜಿನ್​ನ ನ್ಯೂ ಶೆಫರ್ಡ್​ ರಾಕೆಟ್​ ಕ್ಯಾಪ್ಸೂಲ್ 2ನೇ ಬಾರಿ ಬಾಹ್ಯಾಕಾಶಕ್ಕೆ ಹಾರಿದೆ. ಈ ಯಾತ್ರೆ ಯಶಸ್ವಿಯಾಗಿದ್ದು, 90 ವರ್ಷದ ಕೆನಡಾದ ನಟ ವಿಲಿಯಂ ಶಟ್ನರ್​​​​ ಕೂಡ ಇದ್ರ ಭಾಗವಾಗಿದ್ರು. ಈ ಮೂಲಕ ಶಟ್ನರ್​​ ಬಾಹ್ಯಾಕಾಶಕ್ಕೆ ಹೋಗಿ ಬಂದ ಅತಿ ವಯಸ್ಸಾದ ವ್ಯಕ್ತಿ ಅನ್ನೋ ಹೆಸರಿಗೆ ಪಾತ್ರರಾಗಿದ್ದಾರೆ. ಬ್ಲೂ ಒರಿಜಿನ್ ಸಂಸ್ಥೆಯ ಟೆಕ್ಸಾಸ್​ನಲ್ಲಿರೋ ಬೇಸ್​ನಿಂದ ಹಾರಿದ ಈ ನ್ಯೂ ಶೆಫರ್ಡ್​ ನೌಕೆ 11 ನಿಮಿಷಗಳ ಕಾಲ ಹಾರಾಟ ನಡೆಸಿದೆ. ಸಮುದ್ರ ಮಟ್ಟದಿಂದ 106 ಕಿಲೋಮೀಟರ್ ಎತ್ತರಕ್ಕೆ ಹೋಗಿ ಟೆಕ್ಸಾಸ್​​ನ ಮರುಭೂಮಿಗೆ ಬಂದಿಳಿದಿದೆ. ಈ ಪ್ರಯಾಣದಲ್ಲಿ ವಿಲಿಯಂ ಶಟ್ನರ್​ಗೆ ಬ್ಲೂ ಒರಿಜಿನ್​ನ ಎಕ್ಸಿಕ್ಯುಟಿವ್ ಆಡ್ರೆ ಪವರ್ಸ್​, ಪ್ಲಾನೆಟ್ ಲ್ಯಾಬ್ಸ್​ ಕೋ ಫೌಂಡರ್ ಕ್ರಿಸ್ ಬೊಶುಯ್ಜನ್​​ ಮತ್ತು ಗ್ಲೆನ್ ಡಿ ವ್ರೇಯ್ಸ್​ ಅನ್ನೋರು ಕೂಡ ಭಾಗಿಯಾಗಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ಶಟ್ನರ್​, ಇದು ನನ್ನ ಜೀವನದಲ್ಲಿ ನನಗೆ ನಂಬಲು ಅಸಾಧ್ಯವಾದ ಸನ್ನಿವೇಶ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply