ಅಮೆರಿಕದಲ್ಲೂ ಬುಲ್ಡೋಜರ್‌ ಬಾಬಾ: ಯೋಗಿ, ಮೋದಿ ಪರ ಘೋಷಣೆ!

masthmagaa.com:

ʻಭಾರತದ ಬುಲ್ಡೋಜರ್‌ ಬಾಬಾʼ ಅಂತಾನೇ ಫೇಮಸ್‌ ಆಗಿರೋ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಈಗ ದೂರದ ಅಮೆರಿಕದಲ್ಲೂ ರೋಡ್‌ ಶೋ ಮೂಲಕ ದರ್ಶನವಾಗಿದ್ದಾರೆ. ಅದು ಪೋಸ್ಟರ್‌ ಮೂಲಕ…75ನೇ ಸ್ವಾತಂತ್ರ ದಿನದ ಅಂಗವಾಗಿ ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸಿಸಿರೋ ಅನಿವಾಸಿ ಭಾರತೀಯರು ತಿರಂಗ ರ್ಯಾಲಿ ಮಾಡಿದ್ದಾರೆ. ಈ ವೇಳೆ ಬುಲ್ಡೋಜರ್‌ಗಳನ್ನ ರೋಡಲ್ಲಿ ಪ್ರದರ್ಶನ ಮಾಡಿ, ಅದರಲ್ಲಿ ಯೋಗಿ ಫೋಟೋ, ಮೋದಿ ಪೋಟೋ ಹಾಕಿ ಘೋಷಣೆ ಕೂಗಿದ್ದಾರೆ. ಸಿಎಂ ಯೋಗಿ ಜಿಂದಾಬಾದ್‌, ಬುಲ್ಡೋಜರ್‌ ಬಾಬಾ ಜಿಂದಾಬಾದ್‌ ಅಂತ ಕೂಗಿದ್ದಾರೆ. ಈ ದೃಶ್ಯಗಳು ಫುಲ್‌ ವೈರಲ್‌ ಆಗ್ತಾಯಿವೆ.

-masthmagaa.com

Contact Us for Advertisement

Leave a Reply