ವರ್ಲ್ಡ್‌ಕಪ್‌ ನಂತರ ಕ್ಯಾಪ್ಟನ್ಸಿ ಬಿಡ್ತಾರ ಬಾಬರ್‌?

masthmagaa.com:

ವಿಶ್ವಕಪ್‌ನಲ್ಲಿ ಹೀನಾಯ ಪದರ್ಶನ ನೀಡಿರೋ ಪಾಕ್‌ ತಂಡದ ನಾಯಕತ್ವ ಸ್ಥಾನಕ್ಕೆ ಬಾಬರ್‌ ಅಜಮ್‌ ಟೂರ್ನಿ ನಂತರ ರಾಜೀನಾಮೆ ನೀಡಬಹುದು. ಈ ಬಗ್ಗೆ ಪಾಕ್‌ನ ಲೀಗ್‌ ಹಂತದ ಕೊನೆಯ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಬಾಬರ್‌ ಅವರಿಗೆ ಕೇಳಲಾಯ್ತು. ಆಗ ಬಾಬರ್‌, ಪಾಕ್‌ಗೆ ಮರಳಿದ ನಂತರ ಈ ಬಗ್ಗೆ ಯೋಚನೆ ಮಾಡ್ತೀನಿ ಸದ್ಯ ಇಂಗ್ಲೆಂಡ್‌ ಪಂದ್ಯವನ್ನಷ್ಟೇ ಫೋಕಸ್‌ ಮಾಡ್ತಿರೋದು ಅಂದಿದ್ದಾರೆ. ಆದ್ರೆ ಪಾಕ್‌ ಸುದ್ದಿಮಾಧ್ಯಮಗಳ ಪ್ರಕಾರ ಬಾಬರ್‌ ಕ್ಯಾಪ್ಟನ್ಸಿ ತೊರೆಯುವದರ ಕುರಿತು, ತವರಿಗೆ ಮರಳಿದ ನಂತ್ರ PCBಯ ಮಾಜಿ ಮುಖ್ಯಸ್ಥ ರಮೀಜ್‌ ರಾಜಾ ಸೇರಿದಂತೆ ತಮ್ಮ ಆಪ್ತ ವಲಯದವ್ರ ಜೊತೆ ಸಮಾಲೋಚನೆ ನಡೆಸ್ತಾರೆ ಅಂತ ಹೇಳಲಾಗಿದೆ. ಆದ್ರೆ ಅವ್ರ ಆಪ್ತ ವಲಯ ಮಾತ್ರ ಬಾಬರ್‌ 3 ಪಾರ್ಮೆಟ್‌ನ ನಾಯಕತ್ವದಿಂದ ಕೆಳಗಿಯುವಂತೆ ಸಲಹೆ ನೀಡಿದ್ದಾರಂತೆ. ಈಗಾಗಲೇ ಪಾಕ್‌ ತನ್ನ ಕೊನೆ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಭರ್ಜರಿ ಜಯಗಳಿಸಿದ್ರೆ ಮಾತ್ರ ರನ್‌ರೆಟ್‌ ಆಧಾರದ ಮೇಲೆ ಸೇಮಿಸ್‌ ತಲುಪಬಹುದು. ಆದರೆ ಈ ಚಾನ್ಸನ್‌ ತುಂಬಾ ಕಡಿಮೆ ಇದೆ.

-masthmagaa.com

Contact Us for Advertisement

Leave a Reply