ವಿರಾಟ್‌ ಕೊಹ್ಲಿಗೆ ಬೆಂಬಲ ನೀಡಿದ ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಅಜಂ!

masthmagaa.com:

ಪಾಕ್‌ ಮತ್ತು ಭಾರತದ ಮಧ್ಯೆ ಇರೋ ದುಷ್ಮನ್‌ ಕ್ರೀಡೆಯಲ್ಲೂ ಅದರಲ್ಲೂ ಪ್ರಮುಖವಾಗಿ ಕ್ರಿಕೆಟ್‌ನಲ್ಲಿ ಕಂಡು ಬರೋದು ಸಹಜ ಮಾತ್ತು ಸಾಮಾನ್ಯ..ಆದ್ರೆ ಇದೆಲ್ಲದನ್ನೂ ಮೀರಿ ಒಮ್ಮೊಮ್ಮೆ ಎರಡೂ ದೇಶಗಳ ಕ್ರಿಕೆಟಿಗರು ಒಬ್ಬೊಬ್ಬರಿಗೊಬ್ಬರು ಬೆಂಬಲ ಕೊಡುತ್ತಾ, ಬೆನ್ನಿಗೆ ನಿಲ್ಲೋದು ನಡೀತಿರುತ್ತೆ. ಈಗ ಕೂಡ ಅದೇ ಆಗಿದೆ. ಇತ್ತೀಚಿನ ದಿನಗಳನ್ನ ಗಮನಿಸಿದಾಗ ವಿರಾಟ್‌ ಕೊಹ್ಲಿಯವರ ಬ್ಯಾಟಿಂಗ್‌ನಲ್ಲಿ ಮುಂಚೆಯಿದ್ದ ಆ ಶೈನಿಂಗ್‌ಅನ್ನ ನಾವು ಕಾಣ್ತಿಲ್ಲ ಅಂತ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸ್ತಿದ್ದಾರೆ. ಇದರ ನಡುವೆಯೇ ಪಾಕ್‌ ಕ್ರಿಕೆಟ್‌ ತಂಡದ ನಾಯಕ ಬಾಬರ್‌ ಅಜಂ ವಿರಾಟ್‌ ಅವರನ್ನ ಕುರಿತು ಒಂದು ಪೋಸ್ಟ್‌ ಮಾಡಿದ್ದಾರೆ. ಅದರಲ್ಲಿ ವಿರಾಟ್‌ ಹಾಗೂ ಬಾಬರ್‌ ಅಜಂ ಇಬ್ರೂ ಕೂಡ ಇದ್ದು ಮೇಲೆ `ದಿಸಿಸ್‌ ಟೂ ಶಲ್‌ ಪಾಸ್ಟ್‌ ಸ್ಟೇ ಸ್ಟ್ರಾಂಗ್‌ ಅಂದ್ರೆ ಇದು ಬೇಗ ಹೊರಟು ಹೋಗುತ್ತೆ..ಧೈರ್ಯವಾಗಿರಿ’ ಅಂತ ಹೇಳಿದ್ದಾರೆ. ಇದರ ಬೆನ್ನಲ್ಲೇ ಈಗ ವಿರಾಟ್‌ ಕೊಹ್ಲಿ ಕೂಡ ಪ್ರತಿಕ್ರಿಯಿಸಿದ್ದು ಬಾಬರ್‌ ಅಜಂಗೆ ಧನ್ಯವಾದ ತಿಳಿಸಿದ್ದು ಕೀಪ್‌ ಶೈನಿಂಗ್‌ ಅಂಡ್‌ ರೈಸಿಂಗ್‌ ಅಲ್ ದ ಬೆಸ್ಟ್‌ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply