ಮನುಷ್ಯರ ಮುಖವವುಳ್ಳ ಶಾರ್ಕ್! ಎಲ್ಲಿ ಸಿಕ್ಕಿದ್ದು ಗೊತ್ತಾ?

masthmagaa.com:

ಇಂಡೋನೇಷ್ಯಾದ ರೋಟೆ ಡಾವೋ ದ್ವೀಪದ ಬಳಿ ಮೀನುಗಾರನೊಬ್ಬ ಮನುಷ್ಯರ ಮುಖವುಳ್ಳ ಶಾರ್ಕ್ ಮೀನೊಂದನ್ನು ಹಿಡಿದಿದ್ದಾರೆ. ಅಂದ್ರೆ ಆತ ಹಿಡಿದ ಮೀನಿನ ಹೊಟ್ಟೆಯಲ್ಲಿ ಮನುಷ್ಯರ ರೀತಿ ಮುಖ ಹೊಂದಿರೋ ಮರಿ ಪತ್ತೆಯಾಗಿದೆ. ಮೀನುಗಾರ ಅಬ್ದುಲ್ಲಾ ನುರೇನ್​​​ ಆ ಮೀನನ್ನು ಮಾರದೇ ಮನೆಗೆ ತಂದು ಸಂರಕ್ಷಿಸಿಟ್ಟಿದ್ದಾರೆ.

ಇದಾದ ಬಳಿಕ ಆತನ ಮನೆಗೆ ಜನರ ದಂಡೇ ಹರಿದು ಬರ್ತಿದೆ. ಹೋಗೋದು.. ಮನುಷ್ಯರ ಮುಖದ ಮೀನು ನೋಡೋದು.. ಶಾಕ್ ಆಗಿ ಅಬ್ಬಾ ಅನ್ಕೊಂಡು ವಾಪಸ್ ಬರೋದು ಇದೇ ಆಗ್ತಿದೆ.. ಶಾರ್ಕ್​ ಹೊಟ್ಟೆಯಲ್ಲಿ ಒಟ್ಟು 3 ಮೀನಿನ ಮರಿಗಳಿದ್ದವು. ಅದ್ರಲ್ಲಿ 2 ತಾಯಿ ಮೀನಿನ ರೀತಿಯೇ ಇದ್ರೆ, ಒಂದು ಮಾತ್ರ ಹೀಗೆ ಡಿಫ್ರೆಂಟ್ ಆಗಿ ಇತ್ತು ಅಂತ ಅಬ್ದುಲ್ಲಾ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply