ಸಂಸತ್ತಿನ ಭಾಷಣದಲ್ಲಿ ನೆಹರೂ ನೆನೆದ ಪ್ರಧಾನಿ ಮೋದಿ!

masthmagaa.com:

ಇಂದಿನಿಂದ 5 ದಿನಗಳ ವಿಶೇಷ ಸಂಸತ್‌ ಅಧಿವೇಶನ ಆರಂಭಗೊಂಡಿದೆ. ಹಳೆ ಸಂಸತ್‌ ಭವನದಲ್ಲಿ ಇಂದು ಕೊನೆಯ ಕಲಾಪ ನಡೆದಿದ್ದು, ಪ್ರಧಾನಿ ಮೋದಿ ತಮ್ಮ ಕೊನೆಯ ಭಾಷಣ ಮಾಡಿದ್ದಾರೆ. ಕಳೆದ 75 ವರ್ಷಗಳಲ್ಲಿ ಸಂಸತ್ತಿನಲ್ಲಿ ನಡೆದಿರುವ ಪ್ರಮುಖ ಘಟನೆಗಳನ್ನ ಮೋದಿ ನೆನಪಿಸಿಕೊಂಡಿದ್ದಾರೆ. ಜೊತೆಗೆ ಮಾಜಿ ಪ್ರಧಾನಿಗಳಾದ ಪಂಡಿತ್‌ ಜವಹರಲಾಲ್‌ ನೆಹರೂ, ಇಂದಿರಾ ಗಾಂಧಿ ಹಾಗೂ ಅಟಲ್‌ ಬಿಹಾರಿ ವಾಜಪೇಯಿ ಅವ್ರನ್ನ ಹಾಡಿ ಹೊಗಳಿದ್ದಾರೆ. ಇನ್ನು ಹಳೆ ಸಂಸತ್‌ ಭವನದ ಬಗ್ಗೆ ಮಾತಾಡಿರೊ ಮೋದಿ, ಈ ಕಟ್ಟಡವನ್ನ ನಿರ್ಮಿಸುವ ನಿರ್ಧಾರವನ್ನ ವಿದೇಶಿಯರು ತೆಗೆದುಕೊಂಡಿದ್ರು ಅನ್ನೊದು ನಿಜ. ಆದ್ರೆ ಈ ಭವನವನ್ನ ನಾವು ಎಂದಿಗೂ ಮರೆಯೋಕೆ ಸಾಧ್ಯವಿಲ್ಲ. ನಿರ್ಮಾಣಕ್ಕೆ ವ್ಯಯಿಸಲಾಗಿರುವ ಶ್ರಮ ಹಾಗೂ ಹಣ ನನ್ನ ದೇಶವಾಸಿಗಳದ್ದು ಅನ್ನೊದನ್ನ ಹೆಮ್ಮೆಯಿಂದ ಹೇಳಬಹುದು ಅಂತ ಹೇಳಿದ್ದಾರೆ. ಇದೇ ವೇಳೆ ಈ ಸಂಸತ್ತಿನಲ್ಲಿ ಜವಹರ್‌ ಲಾಲ್‌ ನೆಹರೂ ಅವ್ರ ಮಧ್ಯರಾತ್ರಿ ಭಾಷಣ ನಮಗೆ ಸ್ಪೂರ್ತಿ ನೀಡ್ತಾನೇ ಇರುತ್ತೆ. ಇದೇ ಸಂಸತ್ತಿನಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅವರ ʻಸರ್ಕಾರಗಳು ಬರುತ್ವೆ, ಹೋಗುತ್ವೆ. ಪಕ್ಷಗಳು ಸ್ಥಾಪನೆಯಾಗುತ್ವೆ ಹಾಗೆ ನಿರ್ಣಾಮವಾಗುತ್ವೆ. ಆದ್ರೆ ಈ ದೇಶ ಮಾತ್ರ ಇರಲೇಬೇಕುʼ ಅನ್ನೊ ಮಾತುಗಳು ನಮಗೆ ದಾರಿದೀಪವಾಗಿವೆ ಅಂತ ಹೇಳಿದ್ದಾರೆ. ಜೊತೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಧಿಕಾರಾವಧಿಯಲ್ಲಿ ‘ಮತಕ್ಕಾಗಿ ಹಣ’ ಹಗರಣಕ್ಕೂ ಈ ಸಂಸತ್‌ ಸಾಕ್ಷಿಯಾಗಿದೆ ಎಂದಿದ್ದಾರೆ. ನಾವು ಹೊಸ ಸಂಸತ್ತಿನ ಕಟ್ಟಡಕ್ಕೆ ಹೋಗುತ್ತೇವೆ. ಆದರೆ ಈ ಹಳೆಯ ಕಟ್ಟಡ ಯಾವಾಗಲೂ ಸ್ಫೂರ್ತಿ ನೀಡುತ್ತದೆ. ಈ ಸದನದ 75 ವರ್ಷಗಳ ದೊಡ್ಡ ಸಾಧನೆ ಅಂದ್ರೆ ಸಂಸತ್ತು ಜನರ ನಂಬಿಕೆಯನ್ನ ನಿರಂತರವಾಗಿ ಪಡೆದುಕೊಂಡಿರೋದು. ನಾನು ಮೊದಲ ಬಾರಿಗೆ ಈ ಕಟ್ಟಡವನ್ನು ಸಂಸತ್‌ ಸದಸ್ಯನಾಗಿ ಪ್ರವೇಶಿಸಿದೆ. ಜನರಿಂದ ಇಷ್ಟೊಂದು ಪ್ರೀತಿಯನ್ನು ಪಡೆಯುತ್ತೇನೆ ಅಂತ ನಾನು ಊಹಿಸಿರಲಿಲ್ಲ ಅಂತ ಹೇಳಿದ್ದಾರೆ. ಹಾಗೂ ಇದೇ ವೇಳೆ ಈ ವಿಶೇಷ ಅಧಿವೇಶನ ಚಿಕ್ಕದಾಗಿ ಇದ್ರೂ, ಹಲವು ಐತಿಹಾಸಿಕ ಡೆವಲಪ್‌ಮೆಂಟ್‌ಗಳಿಗೆ ಕಾರಣವಾಗಲಿದೆ ಎಂದಿದ್ದಾರೆ. ಅಂದ್ಹಾಗೆ ನಾಳೆಯ ಕಲಾಪ ಹೊಸ ಸಂಸತ್‌ ಭವನದಲ್ಲಿ ನಡೆಯಲಿದೆ. ಇನ್ನು ರಾಜ್ಯಸಭೆಯಲ್ಲಿ ಮಾತಾಡಿದ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಜವಹರ್‌ ಲಾಲ್‌ ನೆಹರೂ ಅವರು ಯಾವಾಗ್ಲೂ ಸ್ಟ್ರಾಂಗ್‌ ವಿರೋಧ ಪಕ್ಷ ಇರ್ಬೇಕು ಅಂತ ಹೇಳಿದ್ರು. ಆದ್ರೆ ಈಗಿನ ಸರ್ಕಾರ ವಿರೋಧ ಪಕ್ಷವನ್ನ ಹೇಗೆ ದುರ್ಬಲಗೊಳಿಸ್ಬೇಕು ಅಂತ ಯೋಚನೆ ಮಾಡುತ್ತೆ. ED, CBIಗಳಿಂದ ವಿರೋಧ ಪಕ್ಷದ ನಾಯಕರನ್ನ ಟಾರ್ಗೆಟ್‌ ಮಾಡಲಾಗುತ್ತೆ ಅಂತ ಆರೋಪಿಸಿದ್ದಾರೆ.

ನಾಳೆಯಿಂದ ಸಂಸತ್‌ನ ಕಾರ್ಯ ಕಲಾಪಗಳು ನೂತನ ಸಂಸತ್‌ ಭವನಕ್ಕೆ ವರ್ಗಾವಣೆ ಆದ ಬಳಿಕ ಹಳೆ ಸಂಸತ್‌ ಭವನ ಏನಾಗಲಿದೆ ಅನನೊ ಪ್ರಶ್ನೆಗಳು ಕೇಳಿ ಬಂದಿವೆ. ಇದಕ್ಕೆ ಸರ್ಕಾರ ಉತ್ತರ ಕೊಟ್ಟಿದ್ದು, ಹಳೆಯ ಸಂಸತ್ ಭವನವನ್ನು ಸರ್ಕಾರ ಉರುಳಿಸಲ್ಲ. ಬ್ರಿಟಿಷ್ ವಾಸ್ತು ಶಿಲ್ಪಿಗಳಾದ ಸರ್ ಎಡ್ವಿನ್ ಲುಟಿಯನ್ಸ್ ಹಾಗೂ ಹಾರ್ಬರ್ಟ್ ಬಕರ್ ಅವರು ವಿನ್ಯಾಸಗೊಳಿಸಿರುವ ಈ ಕಟ್ಟಡವನ್ನು ಹಾಗೆಯೇ ಉಳಿಸಿಕೊಳ್ಳಲಿದೆ ಎಂದಿದೆ. ಜೊತೆಗೆ ಕಟ್ಟಡದ ಮರುವಿನ್ಯಾಸ ಮಾಡಲಿರುವ ಸರ್ಕಾರ, ಸಂಸದೀಯ ಚಟುವಟಿಕೆಗಳಿಗೆ ಸ್ಥಳಾವಕಾಶ ಮಾಡಿಕೊಡಲಿದೆ. ಈ ಭವನವನ್ನ ಭಾರತದ ಪಾರಂಪರಿಕ, ಐತಿಹಾಸಿಕ ಆಸ್ತಿ ಅಂತ ಪರಿಗಣಿಸಲಾಗಿದೆ ಅಂತ ಸರ್ಕಾರ ಹೇಳಿದೆ.

-masthmagaa.com

Contact Us for Advertisement

Leave a Reply