ಬಾಲಾಕೋಟ್ ಸ್ಟ್ರೈಕ್ ಮಾಡಿದ ಯೋಧರಿಗೆ ಸನ್ಮಾನ

ವಾಯುಸೇನೆಯ ನೂತನ ಮುಖ್ಯಸ್ಥ ಆರ್.ಕೆ.ಎಸ್ ಬದೌರಿಯಾ ಇವತ್ತು ಬಾಲಾಕೋಟ್ ಏರ್ ಸ್ಟ್ರೈಕ್ ಮತ್ತು ಪಾಕಿಸ್ತಾನದ ಎಫ್-16 ವಿಮಾನ ಹೊಡೆದುರುಳಿಸಿದ ಯೋಧರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ. ಅಭಿನಂದನ್ ವರ್ಧಮಾನ್‍ರ 51ನೇ ಸ್ಕ್ವಾಡ್ರನ್ ನ ಕಮಾಂಡಿಂಗ್ ಆಫೀಸರ್, ಗ್ರೂಪ್ ಆಫೀಸರ್ ಸತೀಶ್ ಪವಾರ್ ಸನ್ಮಾನ ಸ್ವೀಕರಿಸಿದ್ರು. ಜೊತೆಗೆ ಬಾಲಾಕೋಟ್ ಏರ್‍ಸ್ಟ್ರೈಕ್ ಮಾಡಿದ್ದ 9ನೇ ಸ್ಕ್ವಾಡ್ರನ್‍ಗೂ ಸನ್ಮಾನಿಸಲಾಗಿದೆ. ಈ ಸ್ಕ್ವಾಡ್ರನ್‍ನ ಮಿರಾಜ್ 2000 ಮಿಮಾನಗಳು ಆಪರೇಷನ್ ಮಂಕಿಯನ್ನು ಯಶಸ್ವಿಗೊಳಿಸಿದ್ದವು. ಹೀಗಾಗಿ ಅವರಿಗೆ ಯುನಿಟ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೊತೆಗೆ ಪಾಕಿಸ್ತಾನ ಪ್ರತಿದಾಳಿ ವೇಳೆ ಅದನ್ನು ವಿಫಲಗೊಳಿಸಿದ ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್‍ವಾಲ್ ಅವರ 601 ಸಿಗ್ನಲ್ ಯೂನಿಟ್‍ಗೂ ಪ್ರಶಸ್ತಿ ನೀಡಲಾಗಿದೆ.

Contact Us for Advertisement

Leave a Reply