ರಾಜ್ಯದಲ್ಲಿ ಮತ್ತೆ ಲಾಕ್​ಡೌನ್ ಆಗುತ್ತಾ?

masthmagaa.com:

ದೇಶದಲ್ಲಿ ಕೊರೋನಾ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಲಾಕ್​ಡೌನ್ ಭೀತಿ ಎದುರಾಗಿದೆ. ಈ ಸಂಬಂಧ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಹಲವು ಸಲಹೆಗಳನ್ನು ನೀಡಿದೆ. ಇದೇ ರೀತಿ ಕೇಸ್ ಹೆಚ್ಚಾಗ್ತಾ ಹೋದ್ರೆ ಲಾಕ್​ಡೌನ್ ಅನಿವಾರ್ಯ ಅನ್ನೋದು ಪ್ರಮುಖ ಸಲಹೆಯಾಗಿದೆ. ಯೆಸ್​​.. ವಾರದ ಪಾಸಿಟಿವಿಟಿ ದರ 5 ಪರ್ಸೆಂಟ್ ಜಾಸ್ತಿಯಾದ್ರೆ, ಐಸಿಯು ಬೆಡ್​​ಗಳು 40 ಪರ್ಸೆಂಟ್​​ಗಿಂತ ಜಾಸ್ತಿ ಭರ್ತಿಯಾದ್ರೆ ಲಾಕ್​ಡೌನ್ ಮಾಡೋದು ಅಗತ್ಯ.. ಸದ್ಯ ಮೂರು ವಲಯಗಳನ್ನು ಘೋಷಿಸಿ.. 1 ಮತ್ತು ಒಂದಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರೋ ಜಿಲ್ಲೆಗಳನ್ನು ಯೆಲ್ಲೋ ಝೋನ್ ಅಂತ ಘೋಷಿಸಿ.. 1ರಿಂದ 2ರವರೆಗೆ ಪಾಸಿಟಿವಿಟಿ ದರ ಇರೋ ಜಿಲ್ಲೆಗಳನ್ನು ಆರೆಂಜ್ ಝೋನ್ ಅಂತ ಘೋಷಿಸಿ.. ಅದೇ ರೀತಿ 2 ಪರ್ಸೆಂಟ್​​ಗಿಂತ ಹೆಚ್ಚು ಪಾಸಿಟಿವಿಟಿ ದರ ಇರೋ ಜಿಲ್ಲೆಗಳನ್ನು ರೆಡ್ ಝೋನ್​​ ಅಂತ ಘೋಷಿಸಿ..ಝೋನ್​​​​​​ಗೆ ತಕ್ಕಂತೆ ನಿರ್ಬಂಧಗಳನ್ನು ವಿಧಿಸಿ.. ಅದೇ ಪಾಸಿಟಿವಿಟಿ ದರ 5 ಪರ್ಸೆಂಟ್​​ಗಿಂತ ಜಾಸ್ತಿ ಆದ್ರೆ ಲಾಕ್​ಡೌನ್ ಮಾಡಿ ಅಂತ ತಜ್ಞರ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ 2ನೇ ಅಲೆಯ ಆರಂಭದಲ್ಲೂ ತಜ್ಞರ ಸಮಿತಿ ಇದೇ ರೀತಿಯ ಎಚ್ಚರಿಕೆ ನೀಡಿತ್ತು. ಆದ್ರೆ ಸರ್ಕಾರ ಸ್ವಲ್ಪ ತಡವಾಗಿ ಲಾಕ್​ಡೌನ್ ಮಾಡ್ತು. ಇದ್ರಿಂದ ಎಷ್ಟೆಲ್ಲಾ ಪ್ರಾಬ್ಲಂ ಆಯ್ತು ಅನ್ನೋದನ್ನ ಇಡೀ ರಾಜ್ಯವೇ ನೋಡಿದೆ. ಸೋ ಈ ಸಲ ಸರ್ಕಾರ ಕಳೆದ ವರ್ಷದ ರೀತಿ ರಿಸ್ಕ್ ತಗೊಳ್ಳೋದು ಅನುಮಾನ.. ತಜ್ಞರ ಸಲಹೆಯಂತೆಯೇ ಲಾಕ್​ಡೌನ್ ಮಾಡಿದ್ರೂ ಅಚ್ಚರಿಯಿಲ್ಲ..

-masthmagaa.com

Contact Us for Advertisement

Leave a Reply