ಏನಿದು! ಈ ದೇಶದಲ್ಲಿ ಹೇಳೋರ್ ಕೇಳೋರ್ ಯಾರೂ ಇಲ್ವ!?

masthmagaa.com:

ಬಾಂಗ್ಲಾದೇಶ ಮೂಲದ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಇಡೀ ಬೆಂಗಳೂರಿಗರನ್ನೇ ಬೆಚ್ಚಿ ಬೀಳಿಸಿದೆ. 22 ವರ್ಷದ ಈ ಯುವತಿಯನ್ನು ಅಕ್ರಮವಾಗಿ ಬಾಂಗ್ಲಾದೇಶದಿಂದ ಕರೆ ತರಲಾಗಿತ್ತು. ಈಕೆಯ ಮೇಲೆ ಅತ್ಯಾಚಾರ ನಡೆಸಿರೋ ದುಷ್ಟರು ಕೂಡ ಬಾಂಗ್ಲಾದೇಶದವರೇ. ಈ ಕೃತ್ಯವೆಸಗಿದ ದುಷ್ಟರು ವಿಡಿಯೋ ಕೂಡ ಮಾಡಿದ್ರು. ಈ ವಿಡಿಯೋ ಮೊದಲು ಬಾಂಗ್ಲಾದೇಶದಲ್ಲಿ ಫುಲ್ ಸದ್ದು ಮಾಡಿತ್ತು. ಆಗ ಢಾಕಾ ಮೆಟ್ರೋ ಪಾಲಿಟನ್ ಪೊಲೀಸ್​​ ವ್ಯಾಪ್ತಿಯ ತೇಜ್​ಗಾಂನ ಡಿಸಿಪಿ ಮೊಹ್ಮದ್​​ ಸಹೀದುಲ್ಲಾ ಈ ಪ್ರಕರಣವನ್ನ ಕೈಗೆತ್ತಿಕೊಂಡಿದ್ರು. ವಿಚಾರಣೆ ವೇಳೆ ಭಾರತದಲ್ಲೇ ಎಲ್ಲೋ ಈ ಘಟನೆ ನಡೆದಿರಬಹುದು ಅಂತ ವಿಡಿಯೋದಲ್ಲಿದ್ದ ದುಷ್ಟರ ಸಹಚರರು ಬಾಯ್ಬಿಟ್ಟಿದ್ದಾರೆ. ಇದೇ ಸಂದರ್ಭದಲ್ಲಿ ಬಾಂಗ್ಲಾ ಜೊತೆಗೆ ಗಡಿ ಹಂಚಿಕೊಂಡಿರೋ ಅಸ್ಸಾಂ ಪೊಲೀಸರಿಗೂ ಮಾಹಿತಿ ಬಂದು, ಹುಡುಕಾಟ ಶುರು ಮಾಡಿದ್ರು. ಯಾಕಂದ್ರೆ ಅಸ್ಸಾಂನಲ್ಲೇ ಎಲ್ಲೋ ಈ ಘಟನೆ ನಡದಿದೆ ಅನ್ನೋ ಅನುಮಾನ ವ್ಯಕ್ತವಾಗಿತ್ತು. ಅಸ್ಸಾಂ ಪೊಲೀಸರು ಈ ಕ್ರೂರ ಅಪರಾಧಿಗಳನ್ನು ಹಿಡಿಯೋಕೆ ಸಹಕರಿಸಿದರೆ ಭರ್ಜರಿ ಬಹುಮಾನ ನೀಡೋದಾಗಿ ಅನೌನ್ಸ್​ಮೆಂಟ್ ಕೂಡ ಮಾಡಿದ್ರು. ಜೊತೆಗೆ ದೇಶದಾದ್ಯಂತ ಎಲ್ಲಾ ರಾಜ್ಯಗಳನ್ನು ಅಲರ್ಟ್​ ಮಾಡಲಾಗಿತ್ತು. ಅದರಂತೆ ಕರ್ನಾಟಕ ಪೊಲೀಸರು ಈ ಪ್ರಕರಣವನ್ನ ಗಮನಿಸಿ ತನಿಖೆ ನಡೆಸಿದ್ದು, ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಅಪರಾಧಿಗಳು ಇರೋದನ್ನು ಪತ್ತೆಹಚ್ಚಿ ಕಡೆಗೂ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ 6 ಮಂದಿಯನ್ನು ಅರೆಸ್ಟ್ ಮಾಡಲಾಗಿದ್ದು, ಅದ್ರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಗಂಭೀರ ವಿಚಾರವೆಂದ್ರೆ ಇವರೆಲ್ಲರೂ ಬಾಂಗ್ಲಾದೇಶ ಮೂಲದ ಅಕ್ರಮ ವಲಸಿಗರು.. ಸಂತ್ರಸ್ತೆ ಸೇರಿದಂತೆ ಮಹಿಳೆಯರನ್ನು ಇವರು ಭಾರತಕ್ಕೆ ಕರೆದುಕೊಂಡು ಬಂದಿದ್ದು, ಮಾನವ ಕಳ್ಳಸಾಗಾಣಿಕೆ ಮೂಲಕ ಅಂತ ಗೊತ್ತಾಗಿದೆ. ಇಲ್ಲಿ ಅವರನ್ನು ವೇಷ್ಯಾವಾಟಿಕೆ ಸೇರಿದಂತೆ ನಾನಾ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸಲಾಗ್ತಿತ್ತು. ಸಂತ್ರಸ್ತೆಯನ್ನು ಇದೇ ರೀತಿ ಕರೆದುಕೊಂಡು ಬಂದಿದ್ರು. ಆದ್ರೆ ಕೆಲ ತಿಂಗಳ ಹಿಂದೆ ಆರೋಪಿಗಳು ಮತ್ತು ಸಂತ್ರಸ್ತೆ ನಡುವೆ ದುಡ್ಡಿನ ವಿಚಾರವಾಗಿ ಗಲಾಟೆ ಶುರುವಾಗಿ ಅದು ಗ್ಯಾಂಗ್​ರೇಪ್​ನಲ್ಲಿ ಅಂತ್ಯವಾಗಿತ್ತು ಅಂತ ಪೊಲೀಸರು ಹೇಳಿದ್ದಾರೆ. ಸದ್ಯ ಕೇರಳದ ಕಲ್ಲಿಕೋಟೆಯಲ್ಲಿದ್ದ ಯುವತಿಯನ್ನು ಬೆಂಗಳೂರು ಪೊಲೀಸರು ತನಿಖೆ ಸಲುವಾಗಿ ಹಿಡಿದು ಕರೆದುಕೊಂಡು ಬರುತ್ತಿದ್ದಾರೆ.

ಬೆಂಗಳೂರಲ್ಲಿ ಗ್ಯಾಂಗ್​​ರೇಪ್ ಆರೋಪಿಗಳು ಅರೆಸ್ಟ್​​! ಫುಲ್ ಡೀಟೇಲ್ ಇಲ್ಲಿದೆ!

ಬೆಂಗಳೂರು ಬಾಂಗ್ಲಾಬಾಯ್ಸ್ ಗ್ಯಾಂಗ್‌ರೇಪ್ ಪ್ರಕರಣ ಏನು ಹೇಳುತ್ತೆ?
*ಅಕ್ರಮ ಬಾಂಗ್ಲಾ ವಲಸಿಗರು ದೇಶದಲ್ಲಿ ಇದ್ದಾರೆ.
*ಅವರಿಗೆ ಫೇಕ್ ಆಧಾರ್, ವೋಟರ್ ಐಡಿ ಸಿಗುವಷ್ಟು ನಮ್ ವ್ಯವಸ್ಥೆ ವೀಕ್ ಇದೆ.
*ಅವರಲ್ಲಿ ಕೆಲವರು ವೇಶ್ಯಾವಾಟಿಕೆ etc ಕಾನೂನು ಬಾಹಿರ ಚಟುವಟಿಕೆಗಳಲ್ಲೂ ತೊಡಗಿದ್ದಾರೆ.

-masthmagaa.com

Contact Us for Advertisement

Leave a Reply