ರಷ್ಯಾದ ಮಿಸೈಲ್‌ ದಾಳಿಗೆ ಕತ್ತಲಲ್ಲಿ ಮುಳುಗಿದ ಯುಕ್ರೇನಿಯನ್‌ ಸಿಟಿ!

masthmagaa.com:

ರಷ್ಯಾ ದಾಳಿಗಳು ಜೋರಾಗ್ತಿರೊ ಪರಿಣಾಮ‌ ಯುಕ್ರೇನ್‌ನಲ್ಲಿ ಅಲ್ಲಿನ ಪ್ರಮುಖ ನಗರವೊಂದು ಕತ್ತಲಲ್ಲಿ ಮುಳುಗಿದೆ. ಕಳೆದ 10 ದಿನಗಳ ಹಿಂದೆ ರಷ್ಯಾ ಪಡೆಗಳಿಂದ ಖಾರ್ಕಿವ್‌ ನಗರದ ವಿದ್ಯುತ್‌ ಸ್ಥಾವರಗಳ ಮೇಲೆ ಬ್ಯಾಕ್‌ ಟು ಬ್ಯಾಕ್‌ ಮಿಸೈಲ್‌ ದಾಳಿಗಳು ನಡೆದಿದ್ವು. ಹೀಗಾಗಿ ಅಲ್ಲಿ ವಿದ್ಯುತ್‌ ಸಂಚಾರವೇ ಸ್ಥಗಿತಗೊಂಡಿದ್ದು, ಮರು ನಿರ್ಮಾಣ ಕಾಮಗಾರಿಗೂ ಮತ್ತೆ ದಾಳಿಗಳು ಅಡ್ಡಿ ಪಡಿಸ್ತಿವೆ ಅಂತ ಯುಕ್ರೇನ್‌ ಅಧಿಕಾರಿಗಳು ಕಳವಳ ವ್ಯಕ್ತ ಪಡಿಸಿದ್ದಾರೆ. ಅದ್ರಲ್ಲೂ ಖಾರ್ಕಿವ್‌ನ ಉತ್ತರ ಭಾಗದಲ್ಲಿ ಹೆಚ್ಚು ಡ್ಯಾಮೇಜ್‌ ಆಗಿದ್ದು, ಯುಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ, ರಷ್ಯಾ ದಾಳಿಯನ್ನ ʻಮಿಸೈಲ್‌ ಭಯೋತ್ಪಾದನೆʼ ಅಂತ ಕರೆದಿದ್ದಾರೆ. ಅಲ್ಧೆ ಯುಕ್ರೇನ್‌ನ ಏರ್‌ ಡಿಫೆನ್ಸ್‌ ಸಿಸ್ಟಮ್‌ಗೆ ಹೆಚ್ಚಿನ ರಕ್ಷಣೆ ನೀಡುವಂತೆ ತಮ್ಮ ಮಿತ್ರರಾಷ್ಟ್ರಗಳಿಗೆ ಝೆಲೆನ್ಸ್ಕಿ ಒತ್ತಾಯಿಸಿದ್ದಾರೆ. ಹೀಗಾಗಿ ಸದ್ಯ ಖಾರ್ಕಿವ್‌ನ ಬೀದಿಗಳಲ್ಲಿ ಲೈಟ್‌ ಇಲ್ದೇ ಇರೊ ಕಾರಣ ಸದ್ಯ ಜನರೇಟರ್‌ಗಳನ್ನ ಅಳವಡಿಸಲಾಗಿದೆ.

-masthmagaa.com

Contact Us for Advertisement

Leave a Reply