2 ವರ್ಷದಲ್ಲಿ 16 ಸಾವಿರ ಪೇದೆಗಳ ನೇಮಕ: ಬೊಮ್ಮಾಯಿ

ಮುಂದಿನ 2 ವರ್ಷದೊಳಗೆ 16 ಸಾವಿರ ಪೊಲೀಸ್ ಕಾನ್‍ಸ್ಟೆಬಲ್ ಹಾಗೂ 630 ಪಿಎಸ್‍ಐಗಳ ನೇಮಕಾತಿ ಮಾಡಿಕೊಳ್ಳೋದಾಗಿ ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಪೊಲೀಸ್ ಇಲಾಖೆ ಸುಧಾರಣೆಗೆ ಮುಂಬರುವ ಬಜೆಟ್‍ದಲ್ಲಿ ಹೆಚ್ಚಿನ ಅನುದಾನ ಇಡಲಾಗುವುದು. ಪ್ರಮುಖವಾಗಿ ಸೈಬರ್ ಕ್ರೈಂ ಪಡೆಯನ್ನು ಬಲಪಡಿಸಬೇಕಿದೆ. ಇದನ್ನು ತಾಂತ್ರಿಕವಾಗಿ ಮತ್ತಷ್ಟು ಸುಧಾರಿಸಲಾಗುವುದು ಅಂದ್ರು. ಅಲ್ಲದೆ ಈಗಾಗಲೇ 6 ಸಾವಿರ ಕಾನ್‍ಸ್ಟೇಬಲ್‍ಗಳ ನೇಮಕಾತಿ ಪ್ರಕ್ರಿಯೆ ಚಾಲನೆಯಲ್ಲಿದೆ. ಈ ಕುರಿತು ಹೈಕೋರ್ಟ್ ಗೂ ಮಾಹಿತಿ ಸಲ್ಲಿಸಲಾಗಿದ್ದು, ಹಣಕಾಸು ಇಲಾಖೆ ಕೂಡ ಒಪ್ಪಿಗೆ ಸೂಚಿಸಿದೆ ಅಂತ ಮಾಹಿತಿ ನೀಡಿದ್ರು. ಔರಾದ್ಕರ್ ವರದಿ ಜಾರಿಗೆ ಸರ್ಕಾರ ಬದ್ಧವಿದ್ದು, ಶೀಘ್ರದಲ್ಲೇ ಅಧಿಸೂಚನೆ ಹೊರಡಿಸೋದಾಗಿ ತಿಳಿಸಿದ್ರು.

Contact Us for Advertisement

Leave a Reply