ರಾಜ್ಯದಲ್ಲಿ ಕೋಮುದಳ್ಳುರಿ ಧಗಭಗ! ಚೆನ್ನಕೇಶವನ ಮುಂದೆ ಕುರಾನ್‌ ಪಠಣೆ ಯಾಕೆ ಅಂತ ಹಿಂದೂ ಸಂಘಟನೆಗಳ ಪಟ್ಟು!

masthmagaa.com:

ಐತಿಹಾಸಿಕ ಬೇಲೂರಿನ ಚೆನ್ನಕೇಶವ ರಥೋತ್ಸವದ ವೇಳೆ ಕುರಾನ್‌ ಪಠಣೆ ಮಾಡುವ ಸಂಪ್ರದಾಯವನ್ನ ನಿಲ್ಲಿಸ್ಬೇಕು ಅಂತ ಹಿಂದೂಪರ ಸಂಘಟನೆಗಳು ಮನವಿ ಮಾಡಿವೆ.‌ ಇದೇ ಏಪ್ರಿಲ್‌ 4ನೇ ತಾರೀಖು ಚೆನ್ನಕೇಶವ ಸ್ವಾಮಿಯ ರಥೋತ್ಯವ ನಡೆಯಲಿದ್ದು ಏಪ್ರಿಲ್‌ ​​​ 3ರೊಳಗೆ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಬೇಕು ಅಂತ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಇವತ್ತು ಪ್ರತಿಭಟನೆ ಕೂಡ ನಡೆಸಲಾಗಿದೆ. ಈ ವೇಳೆ ಮುಸ್ಲಿಂ ಯುವಕನೊಬ್ಬ ಕುರಾನ್ ಪರ ಘೋಷಣೆ ಕೂಗಿದ್ದಾನೆ. ಇದರಿಂದ ಎರಡೂ ಸಮುದಾಯದವರ ನಡುವೆ ವಾಗ್ವಾದ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಿಸೋಕೆ ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದ್ದಾರೆ. ಬಳಿಕ ಘೋಷಣೆ ಕೂಗಿದ ಮುಸ್ಲಿಂ ಯುವಕನನ್ನ ವಶಕ್ಕೆ ಪಡೆಯಲಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿ ವಿಶ್ವಪಾರಂಪರಿಕ ಪಟ್ಟಿಗೆ ಸೇರಲು ಸಜ್ಜಾಗಿರೋ ಚೆನ್ನಕೇಶವ ದೇವಾಸ್ಥಾನದಲ್ಲಿ ಪ್ರತಿಬಾರಿಯಿಂದ ಈ ಬಾರಿ ಕೂಡ ಜಾತ್ರೆ ನಡೆಯಲಿದೆ. ರಥೋತ್ಸವದ ವೇಳೆ ಕುರಾನ್‌ ಪಠಣೆ ಮಾಡೋದು ದಶಕಗಳಿಂದ ನಡ್ಕೊಂಡು ಬಂದಿದೆ. ಆದ್ರೆ ಇದು ಇತ್ತಿಚಿಗೆ ಅಂದ್ರೆ 1932ರಲ್ಲಿ ಮಾಡಲಾಗಿರೋ ಸುಳ್ಳು ಸಂಪ್ರದಾಯ. ಚನ್ನಕೇಶವರ ಜಾತ್ರೆ ವೇಳೆ ಗೋವಿಂದ ನಾಮಸ್ಮರಣೆ ಆಗಬೇಕೇ ವಿನಃ ಕುರಾನ್ ಪಠಣೆಯಲ್ಲ. ದರ್ಗಾಗೆ ಹೋಗಿ ಹನುಮಾನ್ ಚಾಲಿಸ ಹೇಳೋಕೆ ಆಗುತ್ತಾ? ಹೀಗಾಗಿ ಈ ಆಚರಣೆಯನ್ನು ಕೈಬಿಡಬೇಕು ಅಂತ ಒತ್ತಾಯ ಕೇಳಿಬಂದಿದೆ.

-masthmagaa.com

Contact Us for Advertisement

Leave a Reply