ಬೆಂಗಳೂರು: ಕಾರ್‌ ಬಾನೆಟ್‌ ಮೇಲೆ ಯುವಕನನ್ನ ಎಳೆದೊಯ್ದ ಯುವತಿ

masthmagaa.com:

ಬೆಂಗಳೂರಿನಲ್ಲಿ ಮತ್ತೊಂದು ಹಿಟ್‌ ಅಂಡ್‌ ಡ್ರಾಗ್‌ ಕೇಸ್‌ ಆಗಿದೆ. ಯುವಕನೊಬ್ಬನನ್ನ ಕಾರಿನ ಬಾನೆಟ್‌ ಮೇಲೆ ಕೂರಿಸಿ ಆತನ ಸಮೇತ ಯುವತಿಯೊಬ್ಬಳು ಎಳೆದೊಯ್ದಿದ್ದಾಳೆ. ಆಕ್ಸಿಡೆಂಟ್‌ ಮಾಡಿ ಸ್ಥಳದಿಂದ ಪರಾರಿಯಾಗ್ತಿದ್ದ ಕಾರಿನ ಚಾಲಕಿಯನ್ನ ತಡೆಯೋಕೆ ಬಂದಾಗ ಯುವಕನಿಗೆ ಗುದ್ದಲಾಗಿದೆ. ಅನಂತರ ಆತ ಬಾನೆಟ್‌ ಮೇಲೆ ಹೋಗಿ ಬಿದ್ದಿದ್ದಾನೆ. ಹೀಗಿದ್ರೂ ಸಹ ಆ ಯುವತಿ ಆತನ ಸಮೇತ ಕಾರು ಚಲಾಯಿಸಿದ್ದಾರೆ. ಈ ವಿಡಿಯೋ ಫುಲ್‌ ವೈರಲ್‌ ಆಗಿದೆ. ಮಾಹಿತಿಯ ಪ್ರಕಾರ, ಶ್ವೇತ ಅನ್ನೋ ಚಾಲಕಿಯ ಕಾರು ಮತ್ತು ದರ್ಶನ್‌ ಅನ್ನೋ ಯುವಕನ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಈ ವೇಳೆ ದರ್ಶನ್‌ ಅವ್ರಿಗೆ ಶ್ವೇತ ಅನ್ನೋ ಯುವತಿ ಅಸಹ್ಯ ಸಹ್ನೆ ಮಾಡಿ (ಮಧ್ಯದ ಬೆರಳು ತೋರಿಸಿ) ಅಲ್ಲಿಂದ ಎಸ್ಕೇಪ್‌ ಆಗೋಕೆ ಮುಂದಾಗಿದ್ದಾರೆ. ಕೋಪಗೊಂಡ ಯುವಕ ಕಾರನ್ನ ತಡೆಯೋಕೆ ಹೋದಾಗ ಆತನ ಮೇಲೆಯೇ ಕಾರನ್ನ ಚಲಾಯಿಸಿಎಳೆದು ಯೊಯ್ಯಲಾಗಿದೆ ಅಂತ ಆರೋಪ ಮಾಡಲಾಗಿದೆ.ಇನ್ನು ಘಟನೆ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಾರನ್ನ ಸೀಜ್‌ ಮಾಡಿರೋದಾಗಿ ಹೇಳಿದ್ದಾರೆ. ಅಂದ್ಹಾಗೆ ಇತ್ತೀಚಿಗಷ್ಟೇ ಸ್ಕೂಟಿ ಹಿಂಬದಿಯನ್ನ ಹಿಡಿದುಕೊಂಡಿದ್ದ ವ್ಯಕ್ತಿಯನ್ನ ಸ್ಕೂಟಿ ಸವಾರ ಎಳೆದುಕೊಂಡ ಹೋದ ಘಟನೆ ನಡೆದಿತ್ತು. ಇದು ಫುಲ್‌ ವೈರಲ್‌ ಆಗಿತ್ತು.

-masthmagaa.com

Contact Us for Advertisement

Leave a Reply