158 ಕೋಟಿ.ರೂ ವಂಚಿಸಿದ್ದ 9 ಜನರನ್ನ ಬಂಧಿಸಿದ ಬೆಂಗಳೂರು ಪೋಲಿಸ್!

masthmagaa.com:

ವರ್ಕ್‌ ಫ್ರಾಮ್‌ ಹೋಮ್‌ ಕೆಲ್ಸ ಕೊಡುಸ್ತೀವಿ ಅಂತ 158 ಕೋಟಿ ರೂಪಾಯಿ ವಂಚನೆ ಮಾಡಿದ್ದ 9 ಜನರನ್ನ ಬೆಂಗಳೂರು ಪೋಲಿಸರು ಬಂಧಿಸಿದ್ದಾರೆ. ವಿದ್ಯಾರಣ್ಯಪುರ ನಿವಾಸಿಯೊಬ್ಬ ಈ ಸಂಬಂಧ ದೂರು ದಾಖಲಿಸಿದ್ರು. ಈ ಬಗ್ಗೆ ತನಿಖೆ ನಡೆಸಿದ ಸೆಂಟ್ರಲ್‌ ಕ್ರೈಂ ಬ್ರಾಂಚ್‌ (CCB) ಪೊಲೀಸರು 9 ಜನರನ್ನ ಅರೆಸ್ಟ್‌ ಮಾಡಿದ್ದಾರೆ. ಈ ಖದೀಮರು ಕೆಲ್ಸ ಕೊಡ್ಸೊದಾಗಿ ದೇಶದ ವಿವಿಧೆಡೆ ಯುವಕರಿಂದ 158 ಕೋಟಿ ರೂಪಾಯಿ ವಂಚನೆ ಮಾಡಿದ್ರು ಅಂತ ಗೊತ್ತಾಗಿದೆ. ಇನ್ನು ಬಂಧಿತರಲ್ಲಿ ಬೆಂಗಳೂರು ಮೂಲದ ಅಮೀರ್‌ ಸೋಹೆಲ್‌ ಮತ್ತು ಇನಾಯತ್‌ ಖಾನ್‌ ಸೇರಿದಂತೆ ಹೈದ್ರಾಬಾದ್‌, ಮುಂಬೈನವರು ಇದ್ರು ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply