ರಾಮೇಶ್ವರಂ ಕೆಫೆ ಸ್ಫೋಟ: ಮತ್ತಿಬ್ಬರು ಶಂಕಿತರು NIA ವಶಕ್ಕೆ!

masthmagaa.com:

ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟದ ವಿಚಾರವಾಗಿ ತನಿಖೆಯಲ್ಲಿ ಫುಲ್‌ ಆಕ್ಟಿವ್‌ ಆಗಿರೊ NIA ತಂಡ ಸದ್ಯ ಮತ್ತಿಬ್ಬರು ಶಂಕಿತರನ್ನ ವಶಕ್ಕೆ ಪಡೆದಿದೆ. ರಾಜ್ಯದ ಶಿವಮೊಗ್ಗ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿದ್ದ NIA, ಸದ್ಯ ಇಬ್ಬರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದೆ. ಅಲ್ದೇ ಕೆಫೆ ಸ್ಫೋಟದ ದಾಳಿಕೋರನ ಜೊತೆ ಈ ಇಬ್ಬರು ಶಂಕಿತರು ನೇರವಾಗಿ ಸಂಪರ್ಕ ಹೊಂದಿದ್ರು ಅಂತ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಅಂತ ಮಾಹಿತಿ ಲಭ್ಯ ಆಗಿದೆ. ಆದ್ರೆ ವಶದಲ್ಲಿರೊ ಶಂಕಿತರಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇನ್ನು ಹೊರಬಂದಿಲ್ಲ.

-masthmagaa.com

Contact Us for Advertisement

Leave a Reply