ಮೂಗಿನ ಮೂಲಕ ಹಾಕುವ ಲಸಿಕೆ ಪ್ರಯೋಗಕ್ಕೆ ಭಾರತದಲ್ಲಿ ತಯಾರಿ!

masthmagaa.com:

ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಲಸಿಕೆಯ ಅಭಿಯಾನ ಇನ್ನು ಕೆಲವೇ ದಿನಗಳಲ್ಲಿ ಶುರುವಾಗುತ್ತೆ. ಇದರ ನಡುವೆಯೇ ಕೋವಾಕ್ಸಿನ್ ಲಸಿಕೆ ಅಭಿವೃದ್ಧಿಪಡಿಸಿರುವ ಭಾರತ್ ಬಯೋಟೆಕ್ ಕಂಪನಿ ಮೂಗಿನ ಮೂಲಕ ಹಾಕುವ ಕೊರೋನಾ ಲಸಿಕೆಯ ಪ್ರಯೋಗಕ್ಕೆ ಸಿದ್ಧತೆ ನಡೆಸಿದೆ. ಈ ನೇಸಲ್​ ವ್ಯಾಕ್ಸಿನ್​ನ ಮೊದಲ ಹಂತದ ಮಾನವ ಪ್ರಯೋಗಕ್ಕೆ ಪರ್ಮಿಷನ್​ ಕೋರಿ ಭಾರತದ ಔಷಧ ನಿಯಂತ್ರಣ ನಿರ್ದೇಶನಾಲಕ್ಕೆ (Drug Controller General of India – DCGI) ಭಾರತ್ ಬಯೋಟೆಕ್ ಕಂಪನಿ ಅರ್ಜಿ ಸಲ್ಲಿಸಿದೆ. ಭಾರತದಲ್ಲಿ ಅನುಮೋದನೆಗೊಂಡಿರುವ ಕೋವಿಶೀಲ್ಡ್​ ಮತ್ತು ಕೋವಾಕ್ಸಿನ್​ ಎರಡು ಡೋಸ್​ನ ಲಸಿಕೆಗಳಾಗಿವೆ. ಆದ್ರೆ ಮೂಗಿನ ಮೂಲಕ ಹಾಕುವ ಈ ಲಸಿಕೆ ಒಂದು ಡೋಸ್​ನದ್ದಾಗಿದೆ. ಅಲ್ಲದೆ ಇದನ್ನ ಮೂಗಿನ ಮೂಲಕ ಹಾಕೋದ್ರಿಂದ ಸಿರಿಂಜ್​ಗಳು ಬೇಕು ಅಂತಿಲ್ಲ. ಅಲ್ಲದೆ ಲಸಿಕೆ ಹಾಕಲು ಬೇಕಾದ ಸಮಯದಲ್ಲೂ ಉಳಿತಾಯವಾಗುತ್ತೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply