ಮಕ್ಕಳಿಗೆ ಎಕ್ಸ್​ಪೈರಿ ಆಗಿರೋ ಲಸಿಕೆ ಹಾಕಲಾಗ್ತಿದ್ಯಾ? ಕೇಂದ್ರದಿಂದ ಸ್ಪಷ್ಟನೆ

masthmagaa.com:

ಭಾರತದಲ್ಲಿ ಇವತ್ತಿಂದ 15ರಿಂದ 18 ವರ್ಷದ ನಡುವಿನ ಮಕ್ಕಳಿಗೂ ಕೊರೋನಾ ಲಸಿಕೆ ಹಾಕಲಾಗ್ತಿದೆ. ಆದ್ರೆ ಇದಕ್ಕೆ ಎಕ್ಸ್​​ಪೈರ್​​ ಆಗಿರೋ ಲಸಿಕೆಯನ್ನು ಬಳಸಲಾಗುತ್ತಿದೆ ಅಂತ ವರದಿಯಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರೋ ಕೇಂದ್ರ ಸರ್ಕಾರ, ಈ ಸುದ್ದಿಗಳು ಸರಿಯಲ್ಲ.. ತಪ್ಪುದಾರಿಗೆಳೆಯೋ ಪ್ರಯತ್ನ ಅಂತ ಹೇಳಿದೆ. ಸೆಂಟ್ರಲ್ ಡ್ರಗ್ಸ್​ ಸ್ಟಾಂಡರ್ಡ್​​ ಕಂಟ್ರೋಲ್ ಆರ್ಗನೈಸೇಷನ್ 2021ರ ಫೆಬ್ರವರಿ 22ರಂದೇ ಕೋವ್ಯಾಕ್ಸಿನ್ ಎಕ್ಸ್ಪೈರಿ ಅವಧಿಯನ್ನು ​ 9ರಿಂದ 12 ತಿಂಗಳಿಗೆ ವಿಸ್ತರಿಸಿದೆ. ಅದೇ ರೀತಿ ಕೋವಿಶೀಲ್ಡ್​​​ ಎಕ್ಸ್​​​ಪೈರಿ ಅವಧಿಯನ್ನು 6ರಿಂದ 9 ತಿಂಗಳಿಗೆ ವಿಸ್ತರಿಸಿದೆ ಅಂತ ಸ್ಪಷ್ಟನೆ ನೀಡಿದೆ.

-masthmagaa.com

Contact Us for Advertisement

Leave a Reply