ಅಫ್ಘಾನಿಸ್ತಾನದ ಬಳಿಕ ಇರಾಕ್‌ನಿಂದಲೂ ಹೊರ ಬರುತ್ತಿದೆ ಅಮೆರಿಕ ಸೇನೆ

masthmagaa.com:

ತಾಲಿಬಾನಿಗಳು ಅಫ್ಘನ್ ಗಡಿಭಾಗವನ್ನು ವಶಕ್ಕೆ ಪಡೆಯುತ್ತಿದ್ದಂತೆ 46 ಮಂದಿ ಅಫ್ಘನ್ ಯೋಧರು ನಮ್ಮಲ್ಲಿ ಆಶ್ರಯ ಪಡೆದಿದ್ದಾರೆ. ಹೀಗೆ ಬಂದ ಯೋಧರಿಗೆ ಆಹಾರ, ವಸತಿ ಮತ್ತು ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಿದ್ದೇವೆ ಅಂತ ಪಾಕ್ ಸೇನೆ ತಿಳಿಸಿದೆ. ಆದ್ರೆ ಈ ಬಗ್ಗೆ ಅಫ್ಗಾನಿಸ್ತಾನ ಕಡೆಯಿಂದ ಯಾವುದೇ ಹೇಳಿಕೆ ಬಿಡುಗಡೆಯಾಗಿಲ್ಲ. ತಾಲಿಬಾನಿಗಳಿಗೆ ಪಾಕಿಗಳು ಸಪೋರ್ಟ್ ಮಾಡ್ತಿದ್ದಾರೆ ಅಂತ ಅಫ್ಘಾನಿಸ್ತಾನ ಆರೋಪಿಸಿದ ಬಳಿಕ ಉಭಯದೇಶಗಳ ನಡುವಿನ ಸಂಬಂಧ ಹಾಳಾಗಿದೆ. ಆರೋಪ, ಪ್ರತ್ಯಾರೋಪ ಮಾಡಿಕೊಳ್ಳುತ್ತಲೇ ಇವೆ. ಇದರ ನಡುವೆಯೂ ತಾಲಿಬಾನಿಗಳು ಗಡಿಭಾಗದ ಪ್ರದೇಶವನ್ನು ಆಕ್ರಮಿಸಿಕೊಳ್ತಿದ್ದಂತೆ ಅಫ್ಘಾನಿಸ್ತಾನದ ನೂರಾರು ಯೋಧರು, ಜನ ತಜಕಿಸ್ತಾನ, ಇರಾನ್ ಮತ್ತು ಪಾಕಿಸ್ತಾನಕ್ಕೆ ಹೋಗ್ತಿದ್ದಾರೆ.

-masthmagaa.com

Contact Us for Advertisement

Leave a Reply