ಈ ರಷ್ಯನ್ ಕಮಾಂಡರ್​ಗೆ ಮಾರಿಯೋಪೋಲ್​​ನ ಕಸಾಯಿ ಅಂತಿರೋದ್ಯಾಕೆ?

masthmagaa.com:

ಮಾರಿಯೋಪೋಲ್​ ನಗರವನ್ನು ರಷ್ಯಾ ಫುಲ್ ಸೀಜ್ ಮಾಡಿದೆ. ಫುಲ್ ಸುತ್ತುವರಿದು ಒಳಗಿರೋರು ಹೊರಗೆ ಬರೋಕೂ ಬಿಡದೇ ದಾಳಿ ನಡೆಸ್ತಿದೆ. ಇದೀಗ ಆ ದಾಳಿಯ ಕಮಾಂಡ್ ವಹಿಸಿಕೊಂಡಿರೋ ವ್ಯಕ್ತಿಯ ಭಯಾನಕ, ಕರಾಳ ಮುಖ ಬಯಲಾಗಿದೆ. ಕರ್ನಲ್ ಜನರಲ್ ಮಿಖೈಲ್ ಮಿಝಿಂಟ್ಸೆವ್​​​​ ತಮ್ಮ ಜೂನಿಯನ್ ಅಧಿಕಾರಿ ಜೊತೆಗೆ ಮಾತನಾಡಿರೋ ಆಡಿಯೋವೊಂದು ಫೋನ್​ಕಾಲ್ ಆಡಿಯೋವೊಂದು ವೈರಲ್ ಆಗಿದೆ. ಇದ್ರಲ್ಲಿ ಸರಿಯಾಗಿ ಸಮವಸ್ತ್ರ ಧರಿಸದ ಸೈನಿಕನ ಕಿವಿಯನ್ನು ಯಾಕೆ ಇನ್ನೂ ಕತ್ತರಿಸಿಲ್ಲ? ಅವನ ಮುಖ ಅಸ್ಥವ್ಯವಸ್ಥಗೊಳಿಸಿ.. ತಪ್ಪಾಗಿ ಸಮವಸ್ತ್ರ ಧರಿಸಿದ್ದಕ್ಕೆ ಉಳಿದವರು ಸೇರಿಕೊಂಡು ಆತನಿಗೆ ಬಾಟಲಿಯಿಂದ ಹೊಡೆಯಿರಿ ಅಂತ ಕರೆ ನೀಡಿದ್ಧಾರೆ. ಶಿಸ್ತುಬದ್ಧವಾಗಿಲ್ಲದ ಆ ಸೈನಿಕ ಇನ್ನೂ ಯಾಕೆ ಕುಂಟತ್ತಿಲ್ಲ ಅಂತೆಲ್ಲಾ ಹೇಳಿದ್ದಾರೆ. ಜೊತೆಗೆ ಅವನು ಕ್ಲೀನ್​ ಆಗಿಲ್ಲ. ಆತ ಕೊಳಕಾಗಿದ್ದು, ಕಣ್ಣುಗಳು ಪಶುವಿನಂತಿವೆ. ಆತ ನನಗೆ ಅತೃಪ್ತ ಮುಖ ತೋರಿಸಿದ್ದಾನೆ ಅಂತ ಹೇಳಿಕೊಂಡಿದ್ದಾರೆ. ಮಾರಿಯೋಪೋಲ್​ನಲ್ಲಿ ರಷ್ಯಾ​​​ ಕಮಾಂಡ್ ಹೊತ್ತಿರೋ ಕರ್ನಲ್ ಮಿಖೈಲ್ ಮಿಝಿಂಟ್ಸೆವ್ ಹೀಗೆಲ್ಲಾ ಮಾತಾಡಿರೋ ಆಡಿಯೋವನ್ನು ಮೊದಲು ಆಸ್ಟ್ರಿಯಾದಲ್ಲಿ ಯುಕ್ರೇನ್ ರಾಯಭಾರಿಯಾಗಿದ್ದ ಒಲೆಕ್ಸಾಂಡರ್ ಚೆಬ್ರಾ ಹಂಚಿಕೊಂಡಿದ್ದಾರೆ. ಈ ಆಡಿಯೋ ವೈರಲ್ ಆಗ್ತಿದ್ದಂತೆ ಮಿಖೈಲ್​ರನ್ನು ಬುಚರ್ ಆಫ್ ಮಾರಿಯೋಪೋಲ್ ಅಂತ ಕರೆಯಲಾಗ್ತಿದೆ. ಅಂದ್ರೆ ಮಾರಿಯೋಪೋಲ್​​ನ ಕಸಾಯಿ ಅಂತ.. ಯಾಕಂದ್ರೆ ಈ ಮಾರಿಯೋಪೋಲ್​ನಲ್ಲಿ ಜನರಿಗೆ ಆಹಾರ, ನೀರು, ಮೆಡಿಸಿನ್ ಪೂರೈಕೆಗೂ ರಷ್ಯಾ ಸೇನೆ ಅವಕಾಶ ನೀಡ್ತಿಲ್ಲ. ಈಗಾಗಲೇ ಮಾರಿಯೋಪೋಲ್​ನಲ್ಲಿ ಸಾವಿರಾರು ಯುಕ್ರೇನಿಯರು ಜೀವ ಕಳ್ಕೊಂಡಿದ್ದಾರೆ ಕೂಡ.. ಅದಕ್ಕೆ ಕಾರಣ ಈ ವ್ಯಕ್ತಿ ಅಂತ ಸೋಷಿಯಲ್ ಮೀಡಿಯಾದಲ್ಲಿ ಜನ ಜಾಡಿಸ್ತಿದ್ದಾರೆ. 2014ರಿಂದ ಮಿಝಿಂಟ್ಸೆವ್​​​​​​ ರಷ್ಯನ್ ನ್ಯಾಷನಲ್ ಸೆಂಟರ್​​ನ ಡೈರೆಕ್ಟರ್ ಆಗಿ ಕೆಲಸ ಮಾಡಿದ್ರು. ಇತ್ತೀಚೆಗೆ ಮಾರಿಯೋಪೋಲ್​ನಲ್ಲಿ ಹೆರಿಗೆ ಆಸ್ಪತ್ರೆ ಮೇಲಿನ ದಾಳಿ, ಥಿಯೇಟರ್ ಮೇಲಿನ ದಾಳಿಗೂ ಇವರೇ ಆದೇಶ ನೀಡಿದ್ದು ಅನ್ನೋ ಆರೋಪ ಕೂಡ ಇದೆ.

-masthmagaa.com

Contact Us for Advertisement

Leave a Reply