ಚೀನಾದ ವಿಂಟರ್ ಒಲಿಂಪಿಕ್ಸ್​ಗೆ ರಾಜತಾಂತ್ರಿಕ ಬಹಿಷ್ಕಾರಕ್ಕೆ ಚಿಂತನೆ: ಬ್ರಿಟನ್

masthmagaa.com:

ಇದ್ರ ಬೆನ್ನಲ್ಲೇ ಚೀನಾದಲ್ಲಿ ಮುಂದಿನ ವರ್ಷ ನಡೆಯಲಿರೋ ವಿಂಟರ್ ಒಲಿಂಪಿಕ್ಸ್​ನ್ನು ರಾಜತಾಂತ್ರಿಕವಾಗಿ ಬಹಿಷ್ಕರಿಸೋ ಬಗ್ಗೆ ಯುನೈಟೆಡ್ ಕಿಂಗ್​ಡಮ್​ ಪ್ರಧಾನಿ
ಬೋರಿಸ್ ಜಾನ್ಸನ್ ಚಿಂತನೆ ನಡೆಸ್ತಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿವೆ. ಸರ್ಕಾರದಲ್ಲಿ ಈ ಬಗ್ಗೆ ಉನ್ನತ ಮಟ್ಟದ ಸಭೆ ನಡೀತಿದ್ದು, ವಿದೇಶಾಂಗ ಸಚಿವ ಲಿಜ್​​ ಟ್ರುಸ್​​ ಕೂಡ ಬಹಿಷ್ಕರಿಸೋ ಪರವಾಗಿಯೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಅಂತ ಮೂಲಗಳು ತಿಳಿಸಿದೆ. ನಿನ್ನೆಯಷ್ಟೇ ಅಮೆರಿಕ ಕೂಡ ಅಧ್ಯಕ್ಷ ಜೋ ಬೈಡೆನ್ ಚೀನಾದಲ್ಲಿ ನಡೆಯಲಿರೋ ವಿಂಟರ್ ಒಲಿಂಪಿಕ್ಸ್​​ನ್ನು ರಾಜತಾಂತ್ರಿಕವಾಗಿ ಬಹಿಷ್ಕರಿಸೋ ಬಗ್ಗೆ ಚಿಂತನೆ ನಡೆಸ್ತಿದ್ದೀವಿ ಅಂತ ಹೇಳಿದ್ರು. ಪೆಂಗ್ ಶುಯ್ ನಾಪತ್ತೆ ಜೊತೆಗೆ ಚೀನಾದಲ್ಲಿ ಆಗ್ತಿರೋ ಮಾನವ ಹಕ್ಕುಗಳ ಉಲ್ಲಂಘನೆ ಕೂಡ ಈ ನಿರ್ಧಾರಕ್ಕೆ ಕಾರಣವಾಗಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ. ರಾಜತಾಂತ್ರಿಕ ಬಹಿಷ್ಕಾರ ಅಂದ್ರೆ ಒಲಿಂಪಿಕ್ಸ್​ನಲ್ಲಿ ಆಟಗಾರರು ಭಾಗಿಯಾಗ್ತಾರೆ. ಆದ್ರೆ ಅಧಿಕಾರಿಗಳಾಗಲೀ, ಸಚಿವರಾಗಲೀ ಭಾಗಿಯಾಗೋದಿಲ್ಲ. ಆದ್ರೆ ಈ ಬಗ್ಗೆ ಕೆಂಡ ಕೆಂಡವಾಗಿ ಪ್ರತಿಕ್ರಿಯಿಸಿರೋ ಚೀನಾ, ಕ್ರೀಡೆಯನ್ನು ಕೂಡ ರಾಜಕೀಯಗೊಳಿಸೋದು ಒಲಿಂಪಿಕ್ ಸ್ಫೂರ್ತಿಗೆ ವಿರುದ್ಧವಾಗಿದೆ. ಎಲ್ಲಾ ದೇಶಗಳ ಕ್ರೀಡಾಪಟುಗಳ ಹಿತಾಸಕ್ತಿಗೆ ಹಾನಿಯಾಗುತ್ತೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply