ಆಗಸ್ಟ್​ 31ರ ನಂತರವೂ ಸ್ಥಳಾಂತರ ಕಾರ್ಯಾಚರಣೆ!

masthmagaa.com:

ಆಗಸ್ಟ್​ 31ಕ್ಕೆ ಏನಾಗುತ್ತೆ ಅನೋದರತ್ತ ವಿಶ್ವದ ಚಿತ್ತ ನೆಟ್ಟಿದೆ. ಯಾಕಂದ್ರೆ ಅಫ್ಘಾನಿಸ್ತಾನದಿಂದ ಹೊರಬರಲು ಅಮೆರಿಕ ಹಾಕಿಕೊಂಡಿರೋ ಡೆಡ್​​ಲೈನ್ ಆಗಸ್ಟ್​ 31ಕ್ಕೆ ಮುಗಿಯುತ್ತಿದೆ. ನಿನ್ನೆಯಷ್ಟೇ ಜೋ ಬೈಡೆನ್ ಕೂಡ ಆಗಸ್ಟ್​​​ 31ರೊಳಗೆ ಸ್ಥಳಾಂತರ ಪ್ರಕ್ರಿಯೆ ಮುಗಿಸ್ತೀವಿ ಅಂತ ಹೇಳಿದ್ರು. ಅದ್ರ ಬೆನ್ನಲ್ಲೇ ಕಾಬೂಲ್ ಏರ್​ಪೋರ್ಟ್​​ನಲ್ಲಿ ಜನಜಂಗುಳಿ ಜಾಸ್ತಿಯಾಗಿತ್ತು. ಇದೀಗ ಆಗಸ್ಟ್​ 31ರ ನಂತರವೂ ಅಫ್ಘಾನಿಸ್ತಾನದಿಂದ ಹೊರಹೋಗುವವರಿಗೆ ಅವಕಾಶ ನೀಡಲು ತಾಲಿಬಾನಿಗಳು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕನ್​, ಆಗಸ್ಟ್​ 31ರ ನಂತರವೂ ಸ್ಥಳಾಂತರ ಪ್ರಕ್ರಿಯೆ ನಡೆಯಲಿದೆ. ಈ ವೇಳೆ ಜನರ ಸುರಕ್ಷತೆಗೆ ಸಂಬಂಧಿಸಿದಂತೆ ತಮ್ಮ ಜವಾಬ್ದಾರಿ ನಿಭಾಯಿಸುವಂತೆ ಅಮೆರಿಕ ಸೇರಿದಂತೆ 114 ದೇಶಗಳು ತಾಲಿಬಾನಿಗಳಿಗೆ ಸೂಚಿಸಿವೆ ಅಂತ ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಒಂದು ಲೆಕ್ಕದ ಪ್ರಕಾರ 6 ಸಾವಿರ ಮಂದಿ ಅಮೆರಿಕನ್ನರು ಇದ್ದಾರೆ ಅಂತ ಅಂದಾಜಿಸಲಾಗಿತ್ತು. ಅವರಲ್ಲಿ ಈಗ 4000 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಇನ್ನೂ ಒಂದೂವರೆ ಸಾವಿರ ಜನ ಅಲ್ಲೇ ಇದ್ದು, ಅವರಲ್ಲಿ 500 ಮಂದಿಯನ್ನು ಪತ್ತೆ ಮಾಡಲಾಗಿದೆ. ಅದೇ ರೀತಿ ಉಳಿದ 1 ಸಾವಿರ ಮಂದಿಯನ್ನು ಸಂಪರ್ಕಿಸುವ ಪ್ರಯತ್ನ ನಡೀತಾ ಇದೆ ಅಂತ ಹೇಳಿದ್ದಾರೆ. ಇತ್ತ ಜರ್ಮನಿ ಕೂಡ ಅಫ್ಘನ್ನರು ಆಗಸ್ಟ್ 31ರ ನಂತರವೂ ದೇಶ ತೊರೆಯಲು ಅವಕಾಶ ನೀಡೋದಾಗಿ ತಾಲಿಬಾನಿಗಳು ಭರವಸೆ ನೀಡಿದ್ದಾರೆ ಅಂತ ತಿಳಿಸಿದೆ. ಜರ್ಮನ್ ರಾಯಭಾರಿ ಮಾರ್ಕಸ್ ಪೋಟ್ಜೆಲ್​ ತಾಲಿಬಾನ್​ನ ಡೆಪ್ಯುಟಿ ಚೀಫ್ ನೆಗೋಷಿಯೇಟರ್ ಶೇರ್ ಮೊಹ್ಮದ್ ಅಬ್ಬಾಸ್ ಸ್ಟಾನಿಕ್​​ಝೈ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಖಚಿತ ದಾಖಲೆ ಹೊಂದಿರೋ ಅಫ್ಘನ್ನರು ಆಗಸ್ಟ್ 31ರ ನಂತರವೂ ನಾಗರಿಕ ವಿಮಾನಗಳಲ್ಲಿ ಪ್ರಯಾಣಿಸಲು ಅನುಮತಿ ನೀಡ್ತೀವಿ. ಏರ್​ಪೋರ್ಟ್​​ವರೆಗೆ ರಕ್ಷಣೆ ಕೂಡ ನೀಡ್ತೀವಿ ಅಂತ ಭರವಸೆ ನೀಡಿದ್ದಾರೆ. ಆದ್ರೆ ಸೇನಾ ವಿಮಾನಗಳ ಕಾರ್ಯಾಚರಣೆ ಆಗಸ್ಟ್​ 31ರ ನಂತರ ಇರೋದಿಲ್ಲ ಅಂತ ಜರ್ಮನಿ ಸ್ಪಷ್ಟಪಡಿಸಿದೆ.)

Contact Us for Advertisement

Leave a Reply