ತೈವಾನ್-ಚೀನಾ ಸಂಘರ್ಷ ತೀವ್ರ! ದ್ವೀಪರಾಷ್ಟ್ರಕ್ಕೆ ಅಮೆರಿಕ ಅಭಯಹಸ್ತ!

masthmagaa.com:

ತೈವಾನ್ ಚೀನಾ ನಡುವಿನ ಸಂಘರ್ಷ ಯುದ್ಧದ ರೂಪ ಪಡೆದುಕೊಳ್ಳುತ್ತಾ ಅನ್ನೋ ಆತಂಕ ಮನೆಮಾಡಿದೆ. ಯಾಕಂದ್ರೆ ಈ ವರ್ಷ ತೈವಾನ್ ವಿಚಾರದಲ್ಲಿ ಚೀನಾ ತುಂಬಾ ಆಕ್ರಮಣಕಾರಿಯಾಗಿ ವರ್ತಿಸ್ತಾ ಇದೆ. 1949ರಲ್ಲಿ ಚೀನಾ ನಾಗರಿಕ ಯುದ್ಧದ ವೇಳೆ ತೈವಾನ್ ಪ್ರತ್ಯೇಕವಾದಾಗಿನಿಂದ ಈವರೆಗೂ ಚೀನಾದಿಂದ ಅತಿಕ್ರಮಣದ ಭೀತಿಯಲ್ಲೇ ಬದುಕ್ತಾ ಇದೆ. ಕಳೆದ ವರ್ಷ 380 ಬಾರಿ ಯುದ್ಧ ವಿಮಾನಗಳು ತೈವಾನ್ ವಾಯುಗಡಿಯನ್ನು ಉಲ್ಲಂಘಿಸಿದ್ರೆ, ಈ ಸಲ ಅಕ್ಟೋಬರ್ 22ರವರೆಗೆ 692 ಬಾರಿ ವಾಯುಗಡಿ ಉಲ್ಲಂಘನೆಯಾಗಿದೆ ಅಂತ ತೈವಾನ್ ತಿಳಿಸಿದೆ. ಅದ್ರಲ್ಲೂ ಇತ್ತೀಚೆಗಂತೂ ಚೀನೀ ಪೈಲಟ್ ಒಬ್ಬ ತೈವಾನೀಸ್ ಏರ್​ ಟ್ರಾಫಿಕ್ ಕಂಟ್ರೋಲರ್​​​ನ ತಾಯಿಗೆಲ್ಲಾ ಅಪಮಾನ ಮಾಡಿ ನಿಂದಿಸಿದ್ದಾನೆ. ಅಂದ್ರೆ ಪ್ರಚೋದಿಸಲು ಯತ್ನಿಸಿದ್ದಾನೆ. ಇದ್ರ ಕ್ಲಿಪ್​ನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ.

ಈ ನಡುವೆ ತೈವಾನ್​ನ ಸರ್ಕಾರಿ ನಿಯೋಗವೊಂದು ಯೂರೋಪ್ ಪ್ರವಾಸ ಕೈಗೊಂಡಿದೆ. ಯೂರೋಪಿಯನ್ ಒಕ್ಕೂಟದ ಮೂರು ಸದಸ್ಯ ದೇಶಗಳಿಗೆ ಪ್ರಯಾಣಿಸುತ್ತಿದ್ದು, ಚೀನಾಗೆ ಟಕ್ಕರ್ ಕೊಟ್ಟಿದೆ. ಯಾಂಕದ್ರೆ ಚೀನಾ ತೈವಾನ್​ಗೆ ಮಾನ್ಯತೆನೇ ಕೊಡಲ್ಲ.. ತೈವಾನ್ ಬೇರೆ ದೇಶನೇ ಅಲ್ಲ. ಅದು ನಮ್ಮದೇ ದ್ವೀಪ ಅಂತ ಹೇಳ್ಕೊಂಡು ಬಂದಿದೆ. ಹೀಗಾಗಿ ತೈವಾನ್ ಸ್ವತಂತ್ರ ದೇಶದಂತೆ ವರ್ತಿಸಿದಾಗಲೆಲ್ಲಾ ಚೀನಾ ಉರ್ಕೊಳ್ತಿರುತ್ತೆ. ಸದ್ಯ 66 ಮಂದಿ ಸದಸ್ಯರಿರೋ ತೈವಾನ್​ನ ನಿಯೋಗ ಸ್ಲೋವಾಕಿಯಾಗೆ ಹೋಗಿದ್ದು, ಅಲ್ಲಿಂದ ಜೆಕ್ ರಿಪಬ್ಲಿಕ್​​​​ ಮತ್ತು ಲಿಥುವೇನಿಯಾಗೂ ಭೇಟಿ ನೀಡಲಿದೆ. ಈ ಮೂರು ದೇಶಗಳು ತೈವಾನ್​​ಗೆ ಕೊರೋನಾ ಲಸಿಕೆ ನೀಡಲಿವೆ ಅಂತ ಕೂಡ ವರದಿಯಾಗಿದೆ. ಅಂದಹಾಗೆ ತೈವಾನ್​​ಗೆ ಬೇರೆ ದೇಶಗಳು ಲಸಿಕೆ ನೀಡದಂತೆ ತಡೆಯುತ್ತಲೇ ಬಂದಿದೆ ಚೀನಾ.

ಇನ್ನು ಅಮೆರಿಕ ಕೂಡ ತೈವಾನ್​​ ಪರವಾಗಿಯೇ ಇದೆ. ಚೀನಾ ಮತ್ತು ತೈವಾನ್ ನಡುವೆ ಹೆಚ್ಚುತ್ತಿರುವ ಸಂಘರ್ಷದ ಬಗ್ಗೆ ಪ್ರತಿಕ್ರಿಯಿಸಿರೋ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​, ಒಂದ್ವೇಳೆ ಚೀನಾ ತೈವಾನ್ ಮೇಲೆ ಆಕ್ರಮಣ ಮಾಡಿದ್ರೆ ತೈವಾನ್ ರಕ್ಷಣೆಗೆ ನಾವು ಬದ್ಧರಾಗಿದ್ದೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply