88 ಲಕ್ಷ ಕೋಟಿ ರೂಪಾಯಿಯ ಯೋಜನೆಗೆ ಬೈಡೆನ್ ಸಹಿ! ಏನಿದೆ?

masthmagaa.com:

ಟೀಕೆ ಮತ್ತು ವಿವಿಧ ರೀತಿಯ ಸಮೀಕ್ಷೆಗಳಲ್ಲಿ ಹಿನ್ನಡೆ ಅನುಭವಿಸುತ್ತಿರೋ ಜೋ ಬೈಡೆನ್ ಮಹತ್ವದ ಮಸೂದೆಯೊಂದಕ್ಕೆ ಸಹಿ ಹಾಕಿದ್ದಾರೆ. ಬರೋಬ್ಬರಿ 1.2 ಟ್ರಿಲಿಯನ್​ ಡಾಲರ್​ ಅಂದ್ರೆ 88 ಲಕ್ಷ ಕೋಟಿ ರೂಪಾಯಿ ಮೊತ್ತದ ಮೂಲಭೂತ ಸಕೌರ್ಯ ಯೋಜನೆಯ ಮಸೂದೆಗೆ ಬಿಲ್ ಹಾಕಿದ್ದಾರೆ. ಇದು ಕಳೆದ 50 ವರ್ಷಗಳಲ್ಲೇ ಸರ್ಕಾರದ ಅತಿದೊಡ್ಡ ಮೂಲಭೂತ ಸೌಕರ್ಯ ಯೋಜನೆಯಾಗಿದೆ. ಈ ಮೂಲಕ ರಸ್ತೆ, ಸೇತುವೆ, ವಾಟರ್​ ಪೈಪ್​​ಗಳ ದುರಸ್ಥಿ, ಎಲೆಕ್ಟ್ರಾನಿಕ್ ವಾಹನಗಳ ಚಾರ್ಜಿಂಗ್ ಪಾಯಿಂಟ್​, ಬ್ರಾಡ್​​ಬಾಂಡ್​​ ಇಂಟರ್​​ನೆಟ್​​ ಸೇವೆ ವಿಸ್ತರಣೆ ಮಾಡೋ ಯೋಜನೆ ಇದಾಗಿದೆ. ಸಹಿ ಹಾಕಿ ಮಾತಾಡಿದ ಜೋ ಬೈಡೆನ್, ಇಷ್ಟು ದಿನ ಭಾಷಣಗಳಲ್ಲೇ ಕೇಳ್ತಿದ್ವಿ. ಇವತ್ತು ಫೈನಲಿ ಜಾರಿಯಾಗಿದೆ. ಅಮೆರಿಕ ಮತ್ತೆ ಮುಂದೆ ಸಾಗಲಿದೆ. ಅಮೆರಿಕನ್ನರ ಜೀವನ ಬದಲಾಗಲಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply