8.5 ಲಕ್ಷ ಮೌಲ್ಯದ ಈರುಳ್ಳಿ ಕಳ್ಳತನ..!

ಈರುಳ್ಳಿ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಈ ನಡುವೆ ಬಿಹಾರದಲ್ಲಿ 8.5 ಲಕ್ಷ ಮೌಲ್ಯದ ಈರುಳ್ಳಿಯನ್ನು ಕಳ್ಳತನ ಮಾಡಲಾಗಿದೆ. ಪಾಟ್ನಾದ ಸೋನಾರುವಿನಲ್ಲಿ ಈರುಳ್ಳಿ ಗೋದಾಮಿಗೆ ಕನ್ನ ಹಾಕಿರುವ ಕಳ್ಳರು ಸುಮಾರು 328 ಮೂಟೆ ಈರುಳ್ಳಿಯನ್ನು ಕದ್ದೊಯ್ದಿದ್ದಾರೆ. ಈ ಈರುಳ್ಳಿಯ ಮೊತ್ತ 8.5 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಇದ್ರ ಜೊತೆಗೆ ಗೋದಾಮಿನಲ್ಲಿ ಇರಿಸಿದ್ದ 1.73 ಲಕ್ಷ ರೂಪಾಯಿ ನಗದನ್ನೂ ಕಳ್ಳರು ಕದ್ದೊಯ್ದಿದ್ದಾರೆ. ಗೋದಾಮು ನಿರ್ಜನ ಪ್ರದೇಶದಲ್ಲಿದ್ದು, ಸೋಮವಾರ ರಾತ್ರಿ ಈ ಘಟನೆ ನಡೆದಿದೆ. ಟ್ರಕ್‍ನಲ್ಲಿ ಈರುಳ್ಳಿ ಮೂಟೆಗಳನ್ನು ತುಂಬಿದ ಕಳ್ಳರು ಪರಾರಿಯಾಗಿದ್ದಾರೆ. ಬೆಳಗ್ಗೆ ಗೋದಾಮಿಗೆ ಬಂದಾಗ ದಂಗಾದ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Contact Us for Advertisement

Leave a Reply