ಹೆಲ್ಮೆಟ್ ಹಾಕಿಕೊಂಡು ವಿಧಾನಸಭೆಗೆ ಬಂದ ಶಾಸಕರು!

masthmagaa.com:

ಬಿಹಾರ ವಿಧಾನಸಭೆಗೆ ಇವತ್ತು ಆರ್​ಜೆಡಿ ಶಾಸಕರು ಹೆಲ್ಮೆಟ್, ಕಪ್ಪು ಕಲರ್ ಮಾಸ್ಕ್​ ಹಾಕ್ಕೊಂಡು ಬಂದಿದ್ದಾರೆ. ಈ ಮೂಲಕ ಮಾರ್ಚ್​ ತಿಂಗಳಲ್ಲಿ ನಮ್ಮ ಮೇಲೆ ನಡೆದ ದೌರ್ಜನ್ಯವನ್ನು ಈ ರೀತಿ ವಿರೋಧಿಸ್ತಿದ್ದೀವಿ. ಸಿಎಂ ನಿತೀಶ್ ಕುಮಾರ್ ಕ್ಷಮೆಯಾಚಿಸಬೇಕು. ಇಲ್ಲವಾದ್ರೆ ನಾವು ಸರ್ಕಾರದ ವಿರುದ್ಧ ನಿಲುವಳಿ ಸೂಚನೆ ಮಂಡಿಸ್ತೀವಿ ಅಂತ ಆರ್​ಜೆಡಿ ಶಾಸಕರು ಹೇಳಿದ್ದಾರೆ. ಕಳೆದ ಮಾರ್ಚ್​​​ನಲ್ಲಿ ಬಿಹಾರ ವಿಧಾನಸಭೆಯಲ್ಲಿ ವಿಶೇಷ ಸಶಸ್ತ್ರ ಪೊಲೀಸ್ ಮಸೂದೆ ಮಂಡಿಸಲಾಗಿತ್ತು. ಇದಕ್ಕೆ ವಿರೋಧಿಸಿ ಆರ್​ಜೆಡಿ ಸೇರಿದಂತೆ ವಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ್ವು. ನಂತರ ಸ್ಪೀಕರ್ ಕೊಠಡಿಗೆ ಮುತ್ತಿಗೆ ಹಾಕಲು ಹೋದಾಗ ಮಾರ್ಷಲ್​​ಗಳು ಒಬ್ಬೊಬ್ರನ್ನೇ ಎತ್ತಿ ಎತ್ತಿ ಹೊರಗೆ ಹಾಕಿದ್ರು.

-masthmagaa.com

Contact Us for Advertisement

Leave a Reply