ಎಲಾನ್ ಮಸ್ಕ್ Vs ಜೆಫ್ ಬೇಝೂಸ್ ಗಲಾಟೆ ತಾರಕಕ್ಕೆ!

masthmagaa.com:

ಟೆಸ್ಲಾ / ಸ್ಪೇಸ್ ಎಕ್ಸ್ ಖ್ಯಾತಿಯ ಎಲಾನ್ ಮಸ್ಕ್ ಮತ್ತು ಅಮೆಜಾನ್ ನ ಜೆಫ್ ಬೇಝೂಸ್ ಕಿತ್ತಾಟ ಮುಗಿಯೋ ಲಕ್ಷಣನೇ ಕಾಣ್ತಿಲ್ಲ. ಎಲ್ಲ ಅವಕಾಶಗಳನ್ನ ಸ್ಪೇಸ್ ಎಕ್ಸ್ ಗೇ ಕೊಡಲಾಗ್ತಿದೆ. ನಾವು ಕಮ್ಮಿಗೆ ಮಾಡ್ಕೊಡ್ತೀವಿ ಅಂದ್ರೂ ಕೊಡ್ತಿಲ್ಲ. ಇದು ಪಾರ್ಶಿಯಾಲಿಟಿ ಅಂತ ನಾಸಾ ವಿರುದ್ಧ ದೂರಿದ್ದ ಜೆಫ್ ಬೇಝೂಸ್ ಕಂಪನಿ ಈಗ ಮತ್ತೆ ಮಸ್ಕ್ ಮೇಲೆ ಮುಗಿಬಿದ್ದಿದೆ. ಜೆಫ್ ಬೇಜೂಸ್ ರ ಸ್ಯಾಟಲೈಟ್ ಕಂಪನಿಯಾದ ಕಿಪರ್ ಸಿಸ್ಟಮ್ಸ್, ಫೆಡರಲ್ ಕಮ್ಯುನಿಕೇಶನ್ ಕಮಿಷನ್ ನಲ್ಲಿ ಮಸ್ಕ್ ವಿರುದ್ಧ ದೂರು ದಾಖಲಿಸಿದೆ. ಮಸ್ಕ್ ಮತ್ತು ಅವರ ಕಂಪನಿಗಳು ಯಾವ ನಿಯಮಗಳನ್ನೂ ಪಾಲಿಸ್ತಿಲ್ಲ. ಲೈಸೆನ್ಸೇ ಇಲ್ಲದ ಆಂಟೆನ್ನಾ ಬಳಸಿ ಸ್ಯಾಟಲೈಟ್ ಲಾಂಚ್ ಮಾಡ್ತಿದಾರೆ. ಅಪ್ರೂವಲ್ ಇಲ್ಲದೆ ರಾಕೆಟ್ ಲಾಂಚ್ ಮಾಡ್ತಿದ್ದಾರೆ. ಅನುಮತಿ ಇಲ್ಲದೆ ಲಾಂಚ್ ಟವರ್ ಕಟ್ಟೋದು, ಇಷ್ಟಬಂದಲ್ಲಿ ಫ್ಯಾಕ್ಟರಿ ಓಪನ್ ಮಾಡೋದು ಮಾಡ್ತಿದಾರೆ. ಇದನ್ನೆಲ್ಲ ನೋಡ್ತಿದ್ರೆ ಕಾನೂನು, ನಿಯಮ ಎಲ್ಲ ಇರೋದು ಬೇರೆಯವರಿಗೆ. ನನಗಲ್ಲ ಅನ್ನೋ ಧೋರಣೆಯನ್ನ ಎಲಾನ್ ಮಸ್ಕ್ ಹೊಂದಿರೋ ಥರ ಕಾಣ್ತಿದೆ. ಇದನ್ನ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಅವರನ್ನ ಟಾರ್ಗೆಟ್ ಮಾಡಲಾಗ್ತಿದೆ’ ಅಂತ ಜೆಫ್ ಬೇಝೂಸ್ ರ ಕಂಪನಿ ದೂರಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರೋ ಸ್ಪೇಸ್ ಎಕ್ಸ್, ಜೆಫ್ ಬೇಝೂಸ್ ಆರೋಪಗಳು ಆಧಾರ ರಹಿತ, ದ್ವೇಷದಿಂದ ಕೂಡಿದ ಬೈಗುಳ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply