ರಾಷ್ಟ್ರಧ್ವಜದ ಮೇಲೆ ಬಿಜೆಪಿ ಬಾವುಟ! ರಸ್ತೆಗಳಿಗೆ ಕಲ್ಯಾಣ್ ಸಿಂಗ್ ಹೆಸರು!

masthmagaa.com:

ಶನಿವಾರ ರಾತ್ರಿ ಕೊನೆಯುಸಿರೆಳೆದ ಉತ್ತರ ಪ್ರದೇಶ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಅವರ ಅಂತ್ಯಕ್ರಿಯೆ ಇವತ್ತು ಬುಲಂದ್ ಶಹರ್​ನಲ್ಲಿ ನಡೀತು. ನಿನ್ನೆ ಇವರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ್ರು. ಈ ವೇಳೆ ಅವರ ಪಾರ್ಥಿವ ಶರೀರ ಇದ್ದ ಬಾಕ್ಸ್​ ಮೇಲೆ ತ್ರಿವರ್ಣ ಧ್ವಜ ಹೊದಿಸಲಾಗಿತ್ತು. ಅದ್ರ ಮೇಲೆ ಬಿಜೆಪಿ
ಧ್ವಜ ಇರಿಸಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಕಾನೂನಿನ ಪ್ರಕಾರ ಯಾವುದೇ ಬಾವುಟ ಅಥವಾ ಬಂಟಿಂಗ್ಸ್​​ಗಳು ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಹಾರಬಾರದು.. ಅಥವಾ ಅವುಗಳನ್ನು ರಾಷ್ಟ್ರಧ್ವಜಕ್ಕಿಂತ ಮೇಲೆ ಇಡಬಾರದು..ಪಕ್ಕದಲ್ಲೂ ಇಡಬಾರದು.. ರಾಷ್ಟ್ರಧ್ವಜದ ಮೇಲೆ ಹೂವು, ಹೂಗುಚ್ಚ ಅಥವಾ ಬೇರೆ ಯಾವುದೇ ವಸ್ತುಗಳನ್ನು ಕೂಡ ಇಡಬಾರದು.. ಆದ್ರೆ ಇಲ್ಲಿ ರಾಷ್ಟ್ರಧ್ವಜದ ಮೇಲೆ ತಮ್ಮ ಪಕ್ಷದ ಬಾವುಟ ಇಡಲಾಗಿದೆ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ ಅಂತ ವಿಪಕ್ಷ ನಾಯಕರು ಸೇರಿದಂತೆ ಸೋಷಿಯಲ್ ಮೀಡಿಯಾ ಮಂದಿ ಉಗಿದು ಉಪ್ಪಿನ ಕಾಯಿ ಹಾಕಿದ್ಧಾರೆ. ಮತ್ತೊಂದ್ಕಡೆ ಅಯೋಧ್ಯೆ, ಲಕ್ನೋ ಸೇರಿದಂತೆ ರಾಜ್ಯದ ಒಟ್ಟು 6 ಜಿಲ್ಲೆಗಳಲ್ಲಿ ಒಂದೊಂದು ರಸ್ತೆಗೆ ಕಲ್ಯಾಣ್ ಸಿಂಗ್ ಅವರ ಹೆಸರಿಡೋದಾಗಿ ಉತ್ತರ ಪ್ರದೇಶ ಸರ್ಕಾರ ಘೋಷಿಸಿದೆ. ಇದ್ರ ಜೊತೆಗೆ ಉತ್ತರ ಪ್ರದೇಶದ ಅಲಿಘರ್ ಏರ್​ಪೋರ್ಟ್​​​​​ಗೆ ಕಲ್ಯಾಣ್ ಸಿಂಗ್ ಹೆಸರಿಡ್ತಾರೆ ಅಂತ ಕೂಡ ಚರ್ಚೆಯಾಗ್ತಿದೆ.

-masthmagaa.com

Contact Us for Advertisement

Leave a Reply