ಜಾರ್ಖಂಡ್ ವಿಧಾನಸಭೆ ಕಟ್ಟಡದಲ್ಲಿ ನಮಾಜ್​​ಗೆ ಪ್ರತ್ಯೇಕ ಕೊಠಡಿ, ವಿವಾದ!

masthmagaa.com:

ಜಾರ್ಖಂಡ್​​ನಲ್ಲಿ ತಲೆ ಎತ್ತಿರೋ ನೂತನ ವಿಧಾನಸಭೆ ಕಟ್ಟಡದಲ್ಲಿ ಮುಸ್ಲಿಂ ಶಾಸಕರು ನಮಾಝ್ ಅಥವಾ ಪ್ರಾರ್ಥನೆ ಮಾಡಲು ಒಂದು ರೂಮನ್ನ ಸರ್ಕಾರ ಅಲಾಟ್​ ಮಾಡಿರೋದು ವಿವಾದಕ್ಕೆ ಕಾರಣವಾಗಿದೆ. ಜಾರ್ಖಂಡ್​ ಸರ್ಕಾರದ ಈ ನಡೆಯಿಂದ ಸಿಟ್ಟಿಗೆದ್ದಿರೋ ಬಿಜೆಪಿ ನಾಯಕರು, ನಮಾಝ್​​ಗೆ ರೂಮ್​ ಕೊಟ್ಟಿದ್ದಕ್ಕೆ ನಮಗೆ ಬೇಸರವಿಲ್ಲ. ವಿಧಾನಸಭೆ ಆವರಣದಲ್ಲಿ ಬೇರೆ ಬೇರೆ ಧರ್ಮದ ಧಾರ್ಮಿಕ ಕೇಂದ್ರಗಳನ್ನ ತೆರೆಯಲು ಕೂಡ ಅವಕಾಶ ಕೊಡ್ಬೇಕು. ನಾವು ಕೂಡ ಹನುಮಾನ್​ ಚಾಲಿಸಾವನ್ನ ಪಠಿಸುತ್ತೀವಿ. ಸ್ಪೀಕರ್ ಅನುಮತಿ ಕೊಟ್ರೆ ನಮ್ಮ ದುಡ್ಡಲ್ಲೇ ದೇವಸ್ಥಾನ ಕಟ್ತೀವಿ ಅಂತ ಬಿಜೆಪಿ ನಾಯಕರು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರೋ ಸ್ಪೀಕರ್​, ಪ್ರತಿ ಶುಕ್ರವಾರ ನಮಾಝ್​ ಮಾಡಕ್ಕೋಸ್ಕರ ಕಲಾಪವನ್ನ ಅರ್ಧಗಂಟೆ ಮುಂದೂಡಿಕೆ ಮಾಡಬೇಕಿತ್ತು. ಅಲ್ಲದೆ ಹಿಂದಿನ ವಿಧಾನಸಭೆ ಕಟ್ಟಡದಲ್ಲೂ ನಮಾಝಿಗೆ ಪ್ರತ್ಯೇಕ ಜಾಗ ಇತ್ತು. ಆದ್ರೆ ಹೊಸ ಕಟ್ಟಡದಲ್ಲಿ ನಮಾಝಿಗೆ ಅಂತ ಪ್ರತ್ಯೇಕ ಸ್ಥಳ ಇರಲಿಲ್ಲ. ಹೀಗಾಗಿ ಪ್ರತ್ಯೇಕ ರೂಮನ್ನ ಕೊಟ್ಟಿದ್ದೇವೆ ಎಂದಿದ್ದಾರೆ. ಅಂದ್ಹಾಗೆ ಜಾರ್ಖಂಡ್​​ನಲ್ಲಿ ಜೆಎಂಎಂ ಜಾರ್ಖಂಡ್​ ಮುಕ್ತಿ ಮೋರ್ಚಾ ಮತ್ತು ಕಾಂಗ್ರೆಸ್ ಪಕ್ಷಗಳ ಮೈತ್ರಿ ಸರ್ಕಾರವಿದೆ. ಬಿಜೆಪಿ ವಿರೋಧ ಪಕ್ಷವಾಗಿದೆ.

-masthmagaa.com

 

Contact Us for Advertisement

Leave a Reply