ಈ ವರ್ಷ ಮೋದಿ ಹುಟ್ಟುಹಬ್ಬಕ್ಕೆ ಬಿಜೆಪಿಗರ ಪ್ಲಾನ್ ಏನು ಗೊತ್ತಾ?

masthmagaa.com:

ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ 71ನೇ ಹುಟ್ಟುಹಬ್ಬ.. ಹೀಗಾಗಿ ಬಿಜೆಪಿಯ ಕಿಸಾನ್ ಮೋರ್ಚಾ ಈ ದಿನವನ್ನು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ಕಿಸಾನ್ ಜವಾನ್ ಸಮ್ಮಾನ್ ದಿವಸ್ ಆಗಿ ಆಚರಿಸೋಕೆ ಮುಂದಾಗಿದೆ. ಈ ದಿನ ಬಲಿದಾನ ಮಾಡಿದ ಯೋಧರ ಕುಟುಂಬಗಳು ಮತ್ತು ಕೃಷಿ ಕ್ಷೇತ್ರದಲ್ಲಿ ಐತಿಹಾಸಿಕ ಸಾಧನೆಗೈದ ರೈತರನ್ನು ಸನ್ಮಾನಿಸಲು ನಿರ್ಧರಿಸಿದೆ. ಜೊತೆಗೆ ಸೆಪ್ಟೆಂಬರ್ 17ರಿಂದ 20 ದಿನಗಳ ಕಾಲ ಸೇವಾ ಮತ್ತು ಸಮರ್ಪಣ್​ ಅಭಿಯಾನ​​​ ನಡೆಸಲು ಬಿಜೆಪಿ ಮುಂದಾಗಿದೆ. ಈ ಮೂಲಕ ಪ್ರಧಾನಿ ಮೋದಿಯ 20 ವರ್ಷಗಳ ಸಾರ್ವಜನಿಕ ಸೇವೆಗೆ ಕೃತಜ್ಞತೆ ಸಲ್ಲಿಸಲು ಮುಂದಾಗಿದೆ ಬಿಜೆಪಿ.

-masthmagaa.com

Contact Us for Advertisement

Leave a Reply