74 ತಾಲಿಬಾನಿಗಳ ಹತ್ಯೆ! ಆಫ್ಘನ್ ರಕ್ಷಣಾ ಸಚಿವರ ಮನೆ ಮುಂದೆ ದಾಳಿ

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹಾವಳಿ ಜಾಸ್ತಿಯಾಗ್ತಿದ್ದಂತೆ, ಅಲ್ಲಿರೋ ಅಮೆರಿಕ ಏರ್​​ಫೋರ್ಸ್​ ಕೂಡ ಆಕ್ಟೀವ್ ಆಗಿದೆ. ಅಫ್ಘಾನಿಸ್ತಾನ ಸೇನೆ ಜೊತೆ ಸೇರಿಕೊಂಡು ಹೇಲ್ಮಾಂದ್​ ಪ್ರಾಂತ್ಯದಲ್ಲಿ ಏರ್​ಸ್ಟ್ರೈಕ್ ನಡೆಸಿ 74 ಮಂದಿ ತಾಲಿಬಾನಿಗಳನ್ನು ಹತ್ಯೆ ಮಾಡಿದೆ. ಆದ್ರೆ ಈ ದಾಳಿಯಲ್ಲಿ ಮಿಲಿಟರಿ ಕಮಿಷನ್​​ನ ಮೂವರು ನಾಯಕರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. 22 ಮಂದಿ ತಾಲಿಬಾನಿಗಳು ಗಾಯಗೊಂಡಿದ್ದಾರೆ ಅಂತ ಕೂಡ ಮಾಹಿತಿ ಲಭ್ಯವಾಗಿದೆ. ಮತ್ತೊಂದ್ಕಡೆ ಅಫ್ಘಾನಿಸ್ತಾನದ ರಕ್ಷಣಾ ಸಚಿವ ಮತ್ತು ಕೆಲ ಸಂಸದರನ್ನು ಗುರಿಯಾಗಿಸಿ ಬಾಂಬ್ ಮತ್ತು ಗುಂಡಿನ ದಾಳಿ ನಡೆದಿದೆ. ಇದ್ರಲ್ಲಿ 20 ಮಂದಿಗೆ ಗಾಯಗಳಾಗಿವೆ. ಇವೆಲ್ಲದ್ರ ಜೊತೆಗೆ ತಾಲಿಬಾನಿಗಳು ಮಾಧ್ಯಮಗಳನ್ನು ಕೂಡ ಟಾರ್ಗೆಟ್ ಮಾಡ್ತಿದ್ದಾರೆ. ಏಪ್ರಿಲ್​​ನಿಂದ ಈವರೆಗೆ ದೇಶದಲ್ಲಿ 51 ಮಾಧ್ಯಮ ಸಂಸ್ಥೆಗಳು ಬಾಗಿಲು ಮುಚ್ಚಿವೆ. ಇದ್ರಿಂದ 150 ಮಹಿಳೆಯರು ಸೇರಿದಂತೆ ಸಾವಿರಕ್ಕೂ ಹೆಚ್ಚು ಜನ ಕೆಲಸ ಕಳೆದುಕೊಂಡಿದ್ದಾರೆ. ಹಿಂಸಾಚಾರದಲ್ಲಿ ಇಬ್ಬರು ಪತ್ರಕರ್ತರು ಪ್ರಾಣ ಕಳೆದುಕೊಂಡಿದ್ದಾರೆ ಅಂತ ಗೊತ್ತಾಗಿದೆ. ಈ ನಡುವೆ ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಮೊಹ್ಮದ್ ಹನೀಫ್ ಅತ್ಮರ್​​ ಭಾರತದ ವಿದೇಶಾಂಗ ಸಚಿವ ಎಸ್​​.ಜೈಶಂಕರ್​ಗೆ ಕರೆ ಮಾಡಿ ಮಾತನಾಡಿದ್ದಾರೆ. ಅಫ್ಘಾನಿಸ್ತಾನ ಭದ್ರತೆ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತುರ್ತು ಸಭೆ ಏರ್ಪಡಿಸಬೇಕೆಂದು ಮನವಿ ಮಾಡಿದ್ಧಾರೆ. ಅಂದಹಾಗೆ ಈ ತಿಂಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿ ಅಧ್ಯಕ್ಷತೆಯನ್ನು ಭಾರತವೇ ವಹಿಸಿಕೊಂಡಿದೆ.

-masthmagaa.com

Contact Us for Advertisement

Leave a Reply