ಯುಕ್ರೇನ್-ರಷ್ಯಾ ಬಿಕ್ಕಟ್ಟು! ಆಸ್ಟ್ರೇಲಿಯಾಗೆ ತೆರಳಿದ ಬ್ಲಿಂಕನ್

masthmagaa.com:

ಯುಕ್ರೇನ್‌ ಬಿಕ್ಕಟ್ಟು ಹೆಚ್ಚಾಗುತ್ತಿರುವ ಬೆನ್ನಲ್ಲೇ ಅಮೇರಿಕಾದ ಸೆಕ್ರಟರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕೆನ್‌ ಮಂಗಳವಾರ ಆಸ್ಟ್ರೇಲಿಯಾದ ಮೆಲ್ಬರ್ನ್‌ಗೆ ಪ್ರಯಾಣಿಸಿದ್ದಾರೆ. ಮೂರು ದಿನಗಳ ಕಾಲ ಮೆಲ್ಬರ್ನ್‌ನಲ್ಲಿ ಉಳಿಯಲಿರುವ ಬ್ಲಿಂಕೆನ್‌ ಜಪಾನ್‌, ಭಾರತ ಮತ್ತು ಆಸ್ಟ್ರೇಲಿಯಾದ ವಿದೇಶಾಂಗ ಸಚಿವರಗಳೊಂದಿಗೆ ಸಭೆ ನಡೆಸಲಿದ್ದಾರೆ. ಆ ಮೂಲಕ ಏಷಿಯಾ-ಫೆಸಿಫಿಕ್‌ ಭಾಗದಲ್ಲಿ ಪ್ರಾಬಲ್ಯಕ್ಕೆ ಹವಣಿಸುತ್ತಿರುವ ಚೀನಾಗೆ ತಡೆಗೋಡೆಯೊಡ್ಡುವ ಯೋಜನೆ ಇದಾಗಿದೆ ಎನ್ನಲಾಗ್ತಿದೆ. ಜೊತೆಗೆ ಈ ಪ್ರವಾಸದಲ್ಲಿ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಸೇರಿದಂತೆ ಅನೇಕ ಆಸ್ಟ್ರೇಲಿಯಾದ ಹಿರಿಯ ಅಧಿಕಾರಿಗಳನ್ನು ಬ್ಲಿಂಕೆನ್‌ ಭೇಟಿಯಾಗಲಿದ್ದು, ಬ್ರಿಟನ್‌ ಒಳಗೊಂಡ ಆಕಸ್‌ (AUKUS) ತ್ರಿಪಕ್ಷೀಯ ರಕ್ಷಣಾ ಒಪ್ಪಂದದ ಬಗ್ಗೆ ಚರ್ಚಿಸಲಿದ್ದಾರೆ.

-masthmagaa.com

Contact Us for Advertisement

Leave a Reply