ಸೆಕ್ಸ್‌ ರ್ಯಾಕೆಟ್‌ ಕೇಸ್‌ನಲ್ಲಿ ಬಾಲಿವುಡ್‌ ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿತ್ತಲ್‌ ಬಂಧನ

masthmagaa.com:

ಬಾಲಿವುಡ್ ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿತ್ತಲ್ ಅನ್ನ ಏಪ್ರಿಲ್ 17 ರಂದು ಮುಂಬೈ ಪೋಲೀಸ್‌ನ ಕ್ರೈಂ ಬ್ರಾಂಚ್‌ ಬಂಧಿಸಿದ್ದಾರೆ. ಆರತಿ ಅವರು ಚಿತ್ರರಂಗದಲ್ಲಿ ಸೆಕ್ಸ್ ರ್ಯಾಕೆಟ್‌ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ವರದಿಗಳ ಪ್ರಕಾರ, ಆರತಿ ಅವರು ಹಣದ ಆಮಿಷ ಒಡ್ಡಿ ಗ್ರಾಹಕರಿಗೆ ಮಾಡೆಲ್‌ಗಳನ್ನು ಕಳಿಸ್ತಾ ಇದ್ದರು. ಆರತಿ ಅವರಿಗೆ ತಲಾ 15,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ ನಂತರ ಇಬ್ಬರು ಮಾಡೆಲ್‌ಗಳು ಬಲೆಗೆ ಬಿದ್ದಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ, ಕ್ರೈಮ್‌ ಬ್ರಾಂಚ್‌ನ ಇಬ್ಬರು ಪೋಲಿಸರು ರಹಸ್ಯವಾಗಿ ಗ್ರಾಹಕರಂತೆ ವೇಷ ಧರಿಸಿ ಮುಂಬೈನ ಗೋರೆಗಾಂವ್‌ನಲ್ಲಿರುವ ಹೋಟೆಲ್‌ಗೆ ಆಗಮಿಸಿದ್ದರು, ಆ ಸಮಯದಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಆರತಿ ಮಿತ್ತಲ್ ನ್ನ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಅಲ್ಲಿ ಇದ್ದಂತ ಹುಡುಗಿರಯನ್ನ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿದೆ ಅಂತ ಪೋಲಿಸರು ಮಾಹಿತಿ ನೀಡಿದ್ದಾರೆ.

ಈ ದಂಧೆಯ ಬಗ್ಗೆ ಮೊದಲು ಮಾಹಿತಿ ಬಂದಿದ್ದು ಪೊಲೀಸ್ ಇನ್ಸ್‌ಪೆಕ್ಟರ್ ಮನೋಜ್ ಸುತಾರ್ ಅವರಿಗೆ. ಈ ದಂಧೆಯನ್ನ ಬಯಲು ಮಾಡಲು ಇವರು ಮಾಡಿದ್ದ ಪ್ಲಾನ್‌ ಬಗ್ಗೆ ಮಾತನಾಡಿದ ಮನೋಜ್‌ “ಈ ರೀತಿ ದಂಧೆ ನಡೀತಾ ಇದೆ ಅಂತ ಇನ್ಫರ್‌ಮೇಷನ್‌ ಬಂದಮೇಲೆ ನಾನು ನನ್ನ ನಂಬರ್‌ನಿಂದ ಆರತಿಗೆ ಕಾಲ್‌ ಮಾಡಿ, ನನ್ನ ಇಬ್ಬರು ಫ್ರೆಂಡ್ಸ್‌ಗೆ ಇಬ್ಬರು ಹುಡುಗಿಯರು ಬೇಕಾಗಿತ್ತು ಕಳಿಸಿಕೊಡಿ ಅಂತ ಹೇಳಿದೆ, ಅವರ ಒಂದಿಷ್ಟು ಹುಡುಗಿಯರ ಫೊಟೊಗಳನ್ನ ನನಗೆ ಫಾರ್ವರ್ಡ್‌ ಮಾಡಿದ್ರು. ಆಮೇಲೆ ನಾನು ಇಬ್ಬರು ಹುಡುಗಿಯರನ್ನ ಸೆಲೆಕ್ಟ್‌ ಮಾಡ್ದೆ. ಆ ಹುಡುಗಿಯರನ್ನ ಕಳಿಸ ಬೇಕು ಅಂದ್ರೆ 60 ಸಾವಿರ ಆಗತ್ತೆ ಅಂತ ಹೇಳಿದ್ಲು. ನಾನು ಕೂಡ ಒಪ್ಪಿಕೊಂಡೆ. ಜುಹು ಹೋಟೆಲ್‌ ಓಕೆ ನಾ ? ಅಥ್ವಾ ಗೋರೆಗಾಂವ್ ಓಕೆನಾ ಅಂತ ಕೇಳಿದ್ಲು ನಾನು ಗೋರೆಗಾಂವ್ ಓಕೆ ಅಂತ ಸೆಲೆಕ್ಟ್‌ ಮಾಡ್ದೆ. ಆ ಪ್ಲೇಸ್‌ಗೆ ಹೋದ ಇಬ್ಬರು ಡಮ್ಮಿ ಕಸ್ಟಮರ್‌ಗೆ 2 ರೂಮ್‌ಗಳನ್ನೂ ಸಹ ಬುಕ್‌ ಮಾಡಿದ್ವಿ. ಆರತಿ ಇಬ್ಬರು ಮಹಿಳೆಯರೊಂದಿಗೆ ಬಂದ್ಲು, ಆ ರಹಸ್ಯ ಇನ್ಸ್‌ಪೆಕ್ಟರ್‌ಗಳಿಗೆ ಗರ್ಭ ನಿರೋಧಕ ಟ್ಯಾಬ್ಲೇಟ್‌ಗಳನ್ನ ನೀಡಿದರು. ಇದೆಲ್ಲವೂ ಕೂಡ ಸಾಕ್ಷಿ ಸಮೇತ ದಾಖಲಾಗಿದೆ.” ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply