ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮರಾದಲ್ಲಿ ಸೆರೆಯಾದ ಸಾನ್ಯಾ ಅಯ್ಯರ್‌ !

masthmagaa.com:

ಕಿರುತರೆಯ ಜನಪ್ರಿಯ ನಟಿ ಸಾನ್ಯಾ ಅಯ್ಯರ್‌ ಬಾಲಿವುಡ್‌ನಲ್ಲಿ ಮಿಂಚಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ಬಾಲಿವುಡ್‌ನಲ್ಲಿ ಪ್ರಾಜೆಕ್ಟ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಮುಂಬೈನಲ್ಲಿ ಅದರ ಶೂಟಿಂಗ್ ಇದೆ ಎಂದಿದ್ದರು. ಇದೀಗ ಸಾನ್ಯಾ ಅಯ್ಯರ್‌ ಬಾಲಿವುಡ್ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಅವರಿಂದ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಡಬೂ ರತ್ನಾನಿ ಅವರಿಂದ ಬಾಲಿವುಡ್‌ನ ಖ್ಯಾತ ನಟ ನಟಿಯರು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅಮಿತಾಭ್ ಬಚ್ಚನ್ ರಿಂದ ಹಿಡಿದು ಇಂದಿನ ಯುವ ನಾಯಕ ನಟರು ಸಹ ಡಬೂ ರತ್ನಾನಿ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟ ಯಶ್‌ ಕೂಡ ಇವರ ಬಳಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಇದೀಗ ತಿರುತರೆಯ ಮುದ್ದಾದ ಗೊಂಬೆ ಸಾನ್ಯಾ, ಡಬೂ ರತ್ನಾನಿ ಕ್ಯಾಮರಾದಲ್ಲಿ ಸೆರೆ ಆಗಿದ್ದಾರೆ.

ಬಿಳಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಸಾನ್ಯಾ ಸಖತ್‌ ಆಗಿ ಮಿಂಚಿದ್ದಾರೆ. ಡಬೂ ರತ್ನಾನಿ ಕ್ಯಾಮಾರಾಗೆ ಸಾನ್ಯಾ ಚಂದದ ಪೋಸ್‌ ಕೊಟ್ಟಿದ್ದಾರೆ. ಸಾನ್ಯಾ ಅಯ್ಯರ್‌ ಫಿಟ್ನೆಸ್‌ ಹಾಗೂ ಗ್ಲಾಮರ್ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಎನ್ನುವುದಕ್ಕೆ ಈ ಪೋಟೋಗಳೇ ಸಾಕ್ಷಿ.

-masthmagaa.com

Contact Us for Advertisement

Leave a Reply