“ಬಾಲಿವುಡ್‌ ನನ್ನನ್ನ ದೂರ ಇಟ್ಟಿತ್ತು”: ಪ್ರಿಯಾಂಕಾ ಚೋಪ್ರಾ

masthmagaa.com:

ನಮ್ಮ ಸಮಾಜದಲ್ಲಿ ಕಲರ್‌, ಬ್ಯೂಟಿ, ಹೈಟ್‌ ಇದೆಲ್ಲವನ್ನ ಆಧಾರವಾಗಿಟ್ಟುಕೊಂಡು ಒಬ್ಬ ಮನುಷ್ಯನ್ನ ಅಳೀತಾರೆ. ಇದು ಕಾಮನ್‌ ಆಗಿ ಬಿಟ್ಟಿದೆ. ಟ್ಯಾಲೆಂಟ್‌ ಇದ್ರೂ ಕೂಡ ಎಷ್ಟೋ ಸಲ ಕಲರ್‌, ಬ್ಯೂಟಿ ಅಡ್ಡ ಬಂದು ಅವರ ಟ್ಯಾಲೆಂಟ್‌ಗೆ ಸೂಕ್ತ ವೇದಿಕೆ ಸಿಗದಂತಹ ಪರಿಸ್ಥಿತಿಗಳು ಸುಮಾರ್‌ ಇದೆ. ಕಲರ್‌, ಬ್ಯೂಟಿ, ಹೈಟ್‌ ಹೀಗೆ ಬಾಹ್ಯ ಸೌಂದರ್ಯದ ಹಿಂದೆ ಒಡುವ ಜಗತ್ತಿನ ಒತ್ತಡಗಳನ್ನ ನಿಭಾಯಿಸಲಾಗದೇ ಸಾಕಷ್ಟು ಜನ ಕೀಳರಿಮೆಗೆ ಒಳಗಾಗಿ ಜನ ಸೂಸೈಡ್‌ ತನಕ ಹೋಗೋದು ಇದೆ. ಇದರ ಬಿಸಿ ಸಿನಿಮಾ ಇಂಡಸ್ಟ್ರಿಯಲ್ಲೂ ಇದೆ. ಬಾಲಿವುಡ್‌ ಇಂಡಸ್ಟ್ರಿಯಲ್ಲಿ ಸ್ವಲ್ಪ ಜಾಸ್ತಿನೆ ಇದೆ ಅನ್ಸತ್ತೆ. ಇದರ ಬಗ್ಗೆ ಸಾಮಾನ್ಯವಾಗಿ ಕಂಗನಾ ರಣಾವತ್‌ ಮಾತಾಡ್ತಾನೇ ಇರ್ತಾರೆ, ಈ ಬಾರಿ ಈ ಕಲರ್‌ ಅನ್ನೋದು ತಮ್ಮ ಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರಿತ್ತು ಅನ್ನೋದರ ಬಗ್ಗೆ ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಓಪನ್‌ ಆಗಿ ಮಾತನಾಡಿದ್ದಾರೆ. ಹಾಗೆನೇ ಕೆಲವು ವರ್ಷಗಳಿಂದ ತಾವು ಬಾಲಿವುಡ್‌ನಿಂದ ದೂರ ಉಳಿಯೋದಕ್ಕೆ ಏನ್‌ ಕಾರಣ ಆಯ್ತು ಅನ್ನೋದನ್ನ ಕೂಡ ಮೊದಲ ಬಾರಿಗೆ ಪ್ರಿಯಾಂಕಾ ಚೋಪ್ರ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ.

ಸ್ನೇಹಿತರೇ,
ಬಣ್ಣಗಳ ಆಧಾರದ ಮೇಲೆ ಬಾಲಿವುಡ್‌ನಲ್ಲಿ ಯಾವ ರೀತಿ ರಾಜಕೀಯ ಮಾಡ್ತಿದ್ರು ಅನ್ನೋದರ ಬಗ್ಗೆ ಸಂದರ್ಶನವೊಂದರಲ್ಲಿ ಪ್ರಿಯಾಂಕ ಚೋಪ್ರಾ ಮಾತನಾಡಿದ್ದಾರೆ.
ಡಾಕ್ಸ್ ಶೆಫರ್ಡ್ ಅವರ ಪಾಡ್‌ಕ್ಯಾಸ್ಟ್‌ನ ಸಂವಾದದ ಸಮಯದಲ್ಲಿ, ಪ್ರಿಯಾಂಕಾ ಅವರು ತಮ್ಮ ಕಂದು ಬಣ್ಣದ ಟೋನ್‌ನಿಂದಾಗಿ ಅಥ್ವಾ ಡಸ್ಕಿ ಸ್ಕಿನ್‌ನಿಂದಾಗಿ ತಮ್ಮ ಸಿನಿಮಾಗಳಿಗೆ ಹೇಗೆ ಡ್ಯಾಮೇಜ್‌ ಆಗ್ತಿತ್ತು ಮತ್ತು ಫೇರ್‌ನೆಸ್ ಕ್ರೀಮ್‌ಗಳ ಅಡ್ವಟೈಸ್‌ಮೆಂಟ್‌ಗಳನ್ನ ಮಾಡಿದಾಗ ಅದು ಅವರ ಮೇಲೆ ಹೇಗೆ ಎಫೆಕ್ಟ್‌ ಆಗ್ತಿತ್ತು ಅನ್ನೋದರ ಬಗ್ಗೆಯೂ ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಹೇಳಿದ್ದಿಷ್ಟು,
“ನಾನು ಮೂವಿಗಳನ್ನ ಮಾಡೋಕೆ ಶುರು ಮಾಡ್ದಾಗ , ನಾನು ಡಸ್ಕಿ ನಟಿ ಅಂತಾನೆ ಆಗ್ಬಿಟ್ಟಿದ್ದೆ. ಕೆರಿಯರ್‌ನ ಶುರುವಿನಲ್ಲಿ ಅದರ ಬಗ್ಗೆ ಯೋಚನೆ ಮಾಡ್ತಿದ್ದೆ. ಡಸ್ಕಿ ಸ್ಕಿನ್‌ ಎಂದರೇನು ? ಇದರ ಅರ್ಥವೇನು ? ಅನ್ನೋ ಯೋಚನೆಗಳು ನನ್ನ ತಲೆಗೆ ಬರ್ತಾ ಇತ್ತು. ಆದರೂ, ನಾನು ಫೇರ್‌ನೆಸ್ ಕ್ರೀಮ್‌ಗಾಗಿ ಆಡ್ಸ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ, ಏಕೆಂದರೆ ನಾವೂ ಆಕ್ಟರ್ಸ್, ಅದೆಲ್ಲಾ ಮಾಡಲೇ ಬೇಕಾಗತ್ತೆ. ಬ್ಯೂಟಿ ಬ್ರ್ಯಾಂಡ್ ಅನ್ನೋದು ನಮ್ಮ ಜೀವನದ ಒಂದು ಭಾಗವಾಗಿ ಬಿಡತ್ತೆ. ನಾವು ಅಡ್ವಟೈಸ್‌ಮೆಂಟ್‌ ಮಾಡ್ತೀವಿ, ಬ್ರ್ಯಾಂಡ್ಸ್‌ಗಳು ಅದನ್ನ ಸೇಲ್‌ ಮಾಡ್ತಾರೆ”. ಅಂತ ಹೇಳಿಕೊಂಡಿದ್ದಾರೆ. ಹಾಗೇ ಮುಂದುವರೆದು 2000ನೇ ಇಸವಿಯಲ್ಲಿ ತಾವು ನಟಿಸಿದ ಒಂದು ಕಮರ್ಷಿಯಲ್‌ ಆಡ್‌ ಬಗ್ಗೆ ಕೂಡ ಮಾತನಾಡಿರುವ ಅವರು ” ಹೂವುಗಳನ್ನು ಮಾರುವ ಕಪ್ಪು ಬಣ್ಣದ ಹುಡುಗಿಯ ಪಾತ್ರದಲ್ಲಿನಾನು ಆಕ್ಟ್‌ ಮಾಡಿದ್ದೆ, ಅವಳನ್ನ ಒಬ್ಬ ಹುಡುಗ ಅವೋಯ್ಡ್‌ ಮಾಡ್ತಾನೆ, ನಂತರ ಅವಳು ಈ ಫೇರ್‌ನೆಸ್ ಕ್ರೀಮ್ ಅನ್ನು ಯ್ಯೂಸ್‌ ಮಾಡೋಕೆ ಶುರು ಮಾಡ್ತಾಳೆ, ನಂತರ ಅವಳು ಕೆಲಸಕ್ಕೆ ಜಾಯ್ನ್‌ ಆಗ್ತಾಳೆ , ಅವಳ ಎಲ್ಲಾ ಕನಸುಗಳು ನನಸಾಗುತ್ತವೆ”.ಎಂದು ಹೇಳಿಕೊಂಡಿದ್ದಾರೆ.

ನಂತರ ತಮ್ಮ ಅನೇಕ ಪಾತ್ರಗಳನ್ನ ಹೇಗೆ ನಿಭಾಯಿಸಿದ್ರು ಎಂಬುದರ ಬಗ್ಗೆಯೂ ಮಾತನಾಡಿರುವ ಪ್ರಿಯಾಂಕ ಚೋಪ್ರಾ “ಒಳ್ಳೆ ಕಲರ್‌ ಇದ್ದೋರಿಗೆ ಈ ಫಿಲ್ಡ್‌ ತುಂಬಾನೇ ಒಳ್ಳೇದು. ನಾನು ಅನೇಕ ಸಿನಿಮಾಗಳಲ್ಲಿ ತುಂಬಾ ಫೇರ್‌ ಕಾಣ್ತೇನೆ. ಅದಕ್ಕೆ ಕಾರಣ ಮೇಕಪ್ ಮತ್ತುಒಳ್ಳೆ ಲೈಟಿಂಗ್ . ನನಗೆ ಇನ್ನೂ ನೆನಪಿರುವ ಒಂದು ಹಾಡು ಕಿಸ್ಮತ್‌ ಮೂವಿಯ ‘ಚಿಟ್ಟಿ ದೂಧ್ ಕುಡಿ’, ಅಂದರೆ ಹಾಲಿನಷ್ಟು ಬೆಳ್ಳಗಿರುವ ಹುಡುಗಿ ಆದರೆ ನಾನು ಬೆಳ್ಳಗೆ ಇರಲಿಲ್ಲ. ಆದರೂ ಕೂಡ ಆ ಪಾತ್ರವನ್ನ ನಾನು ಮಾಡ್ಬೇಕಾಗಿ ಬಂದಿತ್ತು, ಆ ಟೈಮಲ್ಲಿಒಳ್ಳೆ ಲೈಟಿಂಗ್‌ ಮತ್ತು ಮೇಕಪ್‌ ಎಲ್ಲಾ ಮಾಡಿ ನನ್ನನ್ನ ಬೆಳ್ಳಗೆ ಮಾಡಿದ್ರು”ಎಂದು ಹೇಳಿಕೊಂಡಿದ್ದಾರೆ.

ಇನ್ನೂ ನಾನು ಮೊದಲಿಗೆ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳುವ ಹಂತದಲ್ಲಿದ್ದಾಗ ಈ
“ಈ ಸಿನಿಮಾಗ ಫಿಲ್ಡ್‌ಗೆ ನೀವು ಫೇರ್‌ ಇದ್ರೆ ಗ್ಯಾರಂಟಿ ನಿಮಗೆ ಸಕ್ಸಸ್‌ ಸಿಗತ್ತೆ, ಆದರೆ ಕಪ್ಪಿದ್ರೆ ಅದಕ್ಕೆ ಬೇಕಾದಂತ ವ್ಯವಸ್ಥೆ ಮಾಡೋಣ” ಅಂತ ಹೇಳ್ತಾ ಇದ್ರು, ಹಾಗ್‌ ನೋಡಿದ್ರೆ ನಾನು ಅಷ್ಟೇನೂ ಕಪ್ಪು ಇರಲಿಲ್ಲ, ನನಗಿಂತ ಕಪ್ಪು ಇದ್ದೋರಿಗೂ ಕೂಡ ಬೆಳ್ಳಗೆ ಮಾಡಿ ಮ್ಯಾನೇಜ್‌ ಮಾಡುವ ವ್ಯವಸ್ಥೆ ಕೂಡ ಇತ್ತು.

ಇನ್ನೂ ಸದ್ಯಕ್ಕೆ ಹಾಲಿವುಡ್‌ ವೆಬ್‌ ಸಿರೀಸ್‌ ಮತ್ತು ಸಿನಿಮಾಗಳಲ್ಲೇ ಬ್ಯೂಸಿ ಆಗಿರುವ ಪ್ರಿಯಾಂಕ ಚೋಪ್ರಾ ಹಲವು ವರ್ಷಗಳ ಹಿಂದೆ ಅಮೇರಿಕಾಗೆ ಬಂದು ನೆಲೆಸಿದ್ರು, ಬಾಲಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿದ್ದ ಪ್ರಿಯಾಂಕಾ ಚೋಪ್ರಾ ಸಡನ್‌ ಆಗಿ ಹಾಲಿವುಡ್‌ ಕಡೆ ಮುಖ ಮಾಡಿದ್ರು, ಅದಕ್ಕೆ ಏನ್‌ ಕಾರಣ ಅನ್ನೋದನ್ನೂ ಕೂಡ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ. ಅವರೇ ಹೇಳಿದ ಪ್ರಕಾರ ಪ್ರಿಯಾಂಕಾ ಅವರನ್ನ ಬಾಲಿವುಡ್‌ ಕಡೆಗಣಿಸೊದಕ್ಕೆ ಶುರು ಮಾಡಿತ್ತು, ಜನ ನನಗೆ ಕಿರಿಕಿರಿ ಮಾಡೋಕೆ ಶುರು ಮಾಡಿದ್ರು” ನನ್ನನ್ನ ಸಿನಿಮಾಗಳಿಗೆ ಉದ್ದೇಶ ಪೂರ್ವಕವಾಗಿ ಸೆಲೆಕ್ಟ್‌ ಮಾಡದೇ ದೂರ ಇಡಲಾಗುತ್ತಿತ್ತು. ನನ್ನ ವೃತ್ತಿ ಜೀವನವನ್ನ ಕೊನೆಗೊಳಿಸುವ ಎಲ್ಲಾ ರಾಜಕೀಯ ನಡೆದಿತ್ತು, ಸೋ ಇದನ್ನೇಲ್ಲಾ ನನಗೆ ಸಂಭಾಳಿಸೋಕೆ ಆಗದೇ ಬಾಲಿವುಡ್‌ನಿಂದ ಬ್ರೇಕ್‌ ತಗೊಂಡೆ ಹಾಗೇ ಆ ಸಮಯದಲ್ಲಿ ಯು.ಎಸ್‌ ನಿಂದ ಮ್ಯೂಸಿಕ್‌ ಆಲ್ಬಮ್‌ನಲ್ಲಿ ಆಕ್ಟ್‌ ಮಾಡೋದಕ್ಕೆ ಆಫರ್‌ ಬಂತು ಸೋ ಕೆಲಸಕ್ಕಾಗಿ ಅಮೇರಿಕಾಗೆ ಬಂದೆ” ಎಂದು ಪ್ರಿಯಾಂಕ ಚೋಪ್ರಾ ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಕಂಗನಾ ರಣಾವತ್‌ ” ಸೋ ಇದೇ ನೋಡಿ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ ಮಂದಿ ಬಗ್ಗೆ ಹೇಳ್ಕೊಂಡಿರೋದು, ಇಲ್ಲಿ ಜನ ಪ್ರಿಯಾಂಕಾಳನ್ನ ಟಾರ್‌ಗೇಟ್‌ ಮಾಡಿದ್ರು, ಕಾಲೆಳೆದ್ರು, ಇಂಡಸ್ಟ್ರಿಯಿಂದಾನೇ ಒಡಿಸಿ ಬಿಟ್ಟರು. ಸೋ ಈ ರೀತಿ ಒಬ್ಬ ಸೆಲ್ಫ್‌ ಮೇಡ್‌ ನಟಿಯನ್ನ ದೇಶ ಬಿಟ್ಟುಹೋಗೊ ತರ ಮಾಡಿಬಿಟ್ಟರು. ಎಲ್ಲರಿಗೂ ಗೊತ್ತು ಕರಣ್‌ ಜೋಹರ್‌ ಪ್ರಿಯಾಂಕಾ ಚೋಪ್ರಾಳನ್ನ ಬ್ಯಾನ್‌ ಮಾಡಿದ್ದು ಅಂತ”. ಎಂದು ಕಂಗನಾ ರಣಾವತ್‌ ಟ್ವೀಟ್‌ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply