ಟೋಕ್ಯೋ ಒಲಿಂಪಿಕ್ಸ್​ನಲ್ಲಿಂದು ಏನೇನಾಯ್ತು ಗೊತ್ತಾ?

masthmagaa.com:

ಮೊನ್ನೆಯಷ್ಟೆ ಭಾರತಕ್ಕೆ 49 ಕೆ.ಜಿ ವೇಯ್ಟ್‌ ಲಿಫ್ಟಿಂಗ್‌ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಮೀರಾ ಬಾಯಿ ಚಾನುಗೆ, ಚಿನ್ನದ ಪದಕ ಸಿಗುವ ಒಂದು ಸಣ್ಣ ಸಾಧ್ಯತೆ ಇನ್ನೂ ಇದೆ. ಯಾಕಂದ್ರೆ 210 ಕೆ.ಜಿ ಎತ್ತಿ ಹೊಸ ದಾಖಲೆ ಸೃಷ್ಟಿಸಿ, ಚಿನ್ನದ ಪದಕ ಗೆದ್ದಿದ್ದ ಚೀನಾದ ಚುವಿಹೋ ಅವರನ್ನ ಟೋಕ್ಯೋದಲ್ಲಿ ಉಳಿಸಿಕೊಳ್ಳಲಾಗಿದೆ. ಅವರಿಗೆ ಡೋಪಿಂಗ್ ಟೆಸ್ಟ್​ ನಡೆಸಲು ನಿರ್ಧರಿಸಲಾಗಿದ್ದು, ಅದ್ರಲ್ಲಿ ಅವರು ಮಾದಕ ವಸ್ತು ತಗೊಂಡಿದ್ರು ಅಂತ ಸಾಬೀತಾದ್ರೆ, ಪದಕ ಕಳೆದುಕೊಳ್ಳಲಿದ್ದಾರೆ. ಸಿಲ್ವರ್ ಗೆದ್ದಿದ್ದ ಮೀರಾಬಾಯಿ ಚಾನುಗೆ ಚಿನ್ನದ ಪದಕ ಒಲಿಯಲಿದೆ. ಇನ್ನು ಮೀರಾಭಾಯಿ ಚಾನು ಇವತ್ತು ತಮ್ಮ ಮನೆಗೆ ಬಂದಿದ್ದು, ಅದ್ದೂರಿ ಸ್ವಾಗತ ಸಿಕ್ಕಿದೆ.

ಇನ್ನು ಒಲಿಂಪಿಕ್ಸ್‌ ಇತಿಹಾಸದಲ್ಲಿಯೇ ಮೊಟ್ಟಮೊದಲಿಗೆ ಈ ಬಾರಿ ಮಹಿಳೆಯರ ಸ್ಕೇಟ್‌ ಬೋರ್ಡಿಂಗ್‌ ಪ್ರಾರಂಭವಾಗಿದೆ. ಇದ್ರಲ್ಲಿ ಜಪಾನ್‌ನ 13 ವರ್ಷ, 330 ದಿನ ವಯಸ್ಸಿನ ಮೊಮಿಜಿ ನಿಶಿಯಾ ಚಿನ್ನದ ಪದಕವನ್ನ ಗೆದ್ದಿದ್ದಾರೆ. ಬ್ರೆಜಿಲ್‌ನ 13 ವರ್ಷ 203 ದಿನದ ರೆಸ್ಸಾ ಲೀಲ್‌ ಬೆಳ್ಳಿ ಪದಕ ಗೆದ್ದಿದ್ದಾರೆ. ಹಾಗೂ ಜಪಾನ್‌ನ 16 ವರ್ಷದ ಫೂನಾ ನಕಯಾಮಾ ಕಂಚಿನ ಪದಕವನ್ನ ಗೆದ್ದಿದ್ದಾರೆ.

ಅಮೆರಿಕ – 14 ಪದಕವನ್ನ ಗೆಲ್ಲೋದ್ರ ಮೂಲಕ ಈ ಬಾರಿಯ ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಮೊದಲ ಸ್ಥಾನದಲ್ಲಿ ಇದೆ. ಎರಡನೇ ಸ್ಥಾನದಲ್ಲಿ ಜಪಾನ್‌ ಇದ್ದು, 12 ಮೆಡಲ್‌ ವಿನ್‌ ಆಗಿದೆ. ಚೀನಾ 17 ಮೆಡಲ್‌ ಗೆದ್ದಿದ್ದು ಮೂರನೇ ಸ್ಥಾನದಲ್ಲಿ ಇದೆ. ರಷ್ಯಾ ಒಲಿಂಪಿಕ್ಸ್ ಕಮಿಟಿ 12 ಪದಕಗಳೊಂದಿಗೆ 4ನೇ ಪ್ಲೇಸ್​ನಲ್ಲಿದೆ. 7 ಪದಕಗಳನ್ನು ಗೆದ್ದಿರೋ ಗ್ರೇಟ್ ಬ್ರಿಟನ್​, 5ನೇ ಸ್ಥಾನದಲ್ಲಿದೆ. ಇನ್ನು ಭಾರತ ಒಂದು ಬೆಳ್ಳಿ ಪದಕ ಗೆದ್ದಿದ್ದು 29 ನೇ ಸ್ಥಾನದಲ್ಲಿ ಇದೆ.

ಇನ್ನು ಪದಕ ಪಡೆಯೋ ಆಟಗಾರರಿಗೆ ಹೊಸದೊಂದು ಬೋನಸ್ ಬಹುಮಾನ ಕೂಡ ಸಿಕ್ಕಿದೆ. ಅದೇನಂದ್ರೆ ಪದಕ ಪಡೆಯುವಾಗ ಪೋಡಿಯಂ ಮೇಲೆ 30 ಸೆಕೆಂಡ್​​​​ ಮಾಸ್ಕ್ ತೆಗೆಯೋಕೆ ಅವಕಾಶ ನೀಡಲಾಗಿದೆ. ಆದ್ರೆ ಅದನ್ನೇ ದುರ್ಬಳಕೆ ಮಾಡ್ಕೊಂಡು ಎಲ್ಲಾ ಮಾಸ್ಕ್ ತೆಕ್ಕೊಂಡು ಓಡಾಡ್ಬೇಡಿ ಅಂತಲೂ ಎಚ್ಚರಿಸಿದೆ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ. ಇಷ್ಟು ದಿನ ಪದಕ ಗೆದ್ದವರಿಗೂ ಫೋಟೋ ತೆಗೆಯುವಾಗಲೂ ಮಾಸ್ಕ್ ತೆಗೆಯೋಕೆ ಅವಕಾಶ ಇರಲಿಲ್ಲ. ಭಾರತದ ಮೀರಾಭಾಯಿ ಚಾನು ಕೂಡ ಪೋಡಿಯಂನಲ್ಲಿ ಮಾಸ್ಕ್ ಹಾಕ್ಕೊಂಡೇ ಪದಕ ಸ್ವೀಕರಿಸಿದ್ರು.

-masthmagaa.com

Contact Us for Advertisement

Leave a Reply