ಓಂದು ಕೆಲಸದಿಂದ ಮತ್ತೊಂದು ಕೆಲಸಕ್ಕೆ ಜಂಪ್‌ ಆಗೋರು ಈ ಸ್ಟೋರಿ ಓದಲೆಬೇಕು!

masthmagaa.com:

ಕೆಲವರಿಗೆ ಮಾಡಿದ ಕೆಲಸವನ್ನೆ ಮಾಡೋದು ಅಂದ್ರೆ ಬೋರ್‌. ಹಾಗಾಗಿ ಕೆಲವರು ಆಗಾಗ ಬೇರೆ ಬೇರೆ ಕೆಲಸಗಳಿಗೆ ಜಂಪ್‌ ಆಗ್ತ ಇರ್ತಾರೆ. ಆದ್ರೆ ಬ್ರೆಜಿಲ್‌ನ ಶತಾಯುಷಿ ವ್ಯಕ್ತಿಯೊಬ್ರು 84 ವರ್ಷಗಳಿಂದ ಒಂದೇ ಕಂಪನಿಯಲ್ಲಿ ಒಂದೇ ಕೆಲಸ ಮಾಡ್ತ ಇದ್ದಾರೆ ಅನ್ನೋದು ಗೊತ್ತಾಗಿದೆ. ಇದೇ ಕಾರಣಕ್ಕೆ ಈಗ ಅವ್ರು ಗಿನ್ನಿಸ್‌ ವರ್ಲ್ಡ್‌ ರೆಕಾರ್ಡ್‌ ಬುಕ್‌ನಲ್ಲಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. 100 ವರ್ಷದ ವಾಲ್ಟರ್ ಆರ್ಥಮನ್ ಎರಡನೇ ಮಹಾಯುದ್ಧ ಪ್ರಾರಂಭ ಆಗುವ 1 ವರ್ಷದ ಮುಂಚೆ ಇಂದ ಒಂದೇ ಕಂಪನಿಯಲ್ಲಿ ಸೇಲ್ಸ್‌ ಮ್ಯಾನೆಜರ್‌ ಆಗಿ ಕೆಲಸ ಮಾಡ್ತ ಇದ್ದಾರೆ. ಆಗ ಇವರಿಗೆ ಕೇವಲ 15 ವರ್ಷ ಆಗಿತ್ತು ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply