ಬೈಡೆನ್​​​​​, ಬೋರಿಸ್​​ ನಡುವೆ ಉಡುಗೊರೆ ವಿನಿಮಯ! ಕೊಟ್ಟಿದ್ದೇನು ಗೊತ್ತಾ..?

masthmagaa.com:

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈಗ ಜಿ7 ಶೃಂಗಸಭೆಯಲ್ಲಿ ಭಾಗಿಯಾಗಲು ಬ್ರಿಟನ್​​ಗೆ ತೆರಳಿದ್ದಾರೆ. ಅದರಂತೆ ನಿನ್ನೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭೇಟಿಯಾಗಿದ್ದಾರೆ. ಈ ವೇಳೆ ಉಭಯ ನಾಯಕರು ಪರಸ್ಪರ ಉಡುಗೊರೆ ವಿನಿಮಯ ಮಾಡ್ಕೊಂಡಿದ್ದಾರೆ. ಜೋ ಬೈಡೆನ್​​​ಗೆ ಬೋರಿಸ್ ಜಾನ್ಸನ್ ಫ್ರೆಡರಿಕ್ ಡಗ್ಲಾಸ್​​​​ರ ಫೋಟೋ ಗಿಫ್ಟ್ ಆಗಿ ಕೊಟ್ಟಿದ್ದಾರೆ. ಈ ಫ್ರೆಡರಿಕ್ ಡಗ್ಲಾಸ್ ಅಮೆರಿಕದ ಓರ್ವ ಸಮಾಜ ಸುಧಾರಕ, ರಾಜಕೀಯ ನಾಯಕ, ಲೇಖಕರಾಗಿದ್ರು. ಇವರು ಅಮೆರಿಕದಲ್ಲಿ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ್ರು. ಈ ಫೋಟೋ ಕೊಟ್ಟಿರೋದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಅಮೆರಿಕದಲ್ಲಿ ಕಳೆದ ವರ್ಷ ಕಪ್ಪು ವರ್ಣೀಯರ ವಿರುದ್ಧದ ಹಿಂಸಾಚಾರದ ಘಟನೆಗಳು ವರದಿಯಾಗಿದ್ವು. ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು. ಇನ್ನು ಬೋರಿಸ್ ಜಾನ್ಸನ್​​ಗೆ ಜೋ ಬೈಡೆನ್ ಅಮೆರಿಕದಲ್ಲಿ ಸಿದ್ಧಪಡಿಸಲಾದ ಒಂದು ಬೈಕ್ ಮತ್ತು ಹೆಲ್ಮೆಟ್ ನೀಡಿದ್ದಾರೆ. ಜೊತೆಗೆ ಬೋರಿಸ್ ಪತ್ನಿಗೆ ಒಂದು ರೇಷ್ಮೆ ಶಾಲು ಮತ್ತು ಲೆದರ್ ಬ್ಯಾಗ್ ಗಿಫ್ಟಾಗಿ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply