ಬ್ರೆಜಿಲ್​​ನಲ್ಲಿ 5 ಲಕ್ಷ ಗಡಿ ದಾಟಿದ ಕೊರೋನಾ ಸಾವು!

masthmagaa.com:

ಬ್ರೆಜಿಲ್​​ನಲ್ಲಿ ಕೊರೋನಾದ ಮರಣ ಮೃದಂಗ ಮುಂದುವರಿದಿದೆ. ಒಟ್ಟು ಮೃತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. 1.78 ಕೋಟಿ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಲಸಿಕೆ ಅಭಿಯಾನ ಮಂದಗತಿಯಲ್ಲಿ ಸಾಗ್ತಿರೋದು ಮತ್ತು ಸಾಮಾಜಿಕ ಅಂತರ ಸೇರಿದಂತೆ ಕೊರೋನಾ ರೂಲ್ಸ್​​ಗಳಿಗೆ ಸರ್ಕಾರ ಬೆಂಬಲಿಸದೇ ಇರೋದು ಕೊರೋನಾ ಅಬ್ಬರಕ್ಕೆ ಕಾರಣ.. ಅದೂ ಅಲ್ಲದೆ ದೇಶದಲ್ಲಿ ರೂಪಾಂತರಿ ತಳಿಗಳು ಪತ್ತೆಯಾಗ್ತಿದ್ದು, ಇದ್ರಿಂದ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

-masthmagaa.com

Contact Us for Advertisement

Leave a Reply