ಜಮ್ಮು ಕಾಶ್ಮೀರಕ್ಕೆ ಬಂದ ಆಫ್ಘನ್ ಪ್ರಜೆ! ಆಮೇಲೆ ಏನಾಯ್ತು..?

masthmagaa.com:

ಅಫ್ಘಾನಿಸ್ತಾನವನ್ನ ತಾಲಿಬಾನ್​ ಟೇಕೋವರ್ ಮಾಡಿದ ಬಳಿಕ ತಾಲಿಬಾನಿಗಳಿಂದ ತಪ್ಪಿಸಿಕೊಂಡು ಯಾರ್ಯಾರು, ಹೇಗೇಗೆ, ಯಾವ್ಯಾವ ದೇಶಕ್ಕೆ ಹೋಗಿದ್ದಾರೆ ಗೊತ್ತಿಲ್ಲ. ಇದರ ನಡುವೆಯೇ ಜಮ್ಮು ಕಾಶ್ಮೀರದಲ್ಲೊಬ್ಬ 17 ವರ್ಷದ ಅಫ್ಘನ್​ ಪ್ರಜೆಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಂದ್ಹಾಗೆ ಈತ ಕಥುವಾ ಜಿಲ್ಲೆಯ ಲಖನ್​ಪುರ್​ನಲ್ಲಿರೋ ಕೊರೋನಾ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾನೆ. ಈ ವೇಳೆ ಪೊಲೀಸರು ಹೆಚ್ಚಿನ ವಿಚಾರಣೆಗಾಗಿ ಆತನನ್ನ ಠಾಣೆಗೆ ಕರ್ಕೊಂಡ್​ ಹೋಗಿದ್ದಾರೆ. ವಿಚಾರಣೆ ವೇಳೆ ಈತ ತನ್ನ ಸಹೋದರನ ಜೊತೆ ಭಾರತಕ್ಕೆ ಬಂದಿದ್ದಾನೆ ಗೊತ್ತಾಗಿದೆ. ಜೊತೆಗೆ ಈತನ ಸಹೋದರ ಅಫ್ಘನಿಸ್ತಾನ ಸೇನೆಯಲ್ಲಿ ಕೆಲಸ ಮಾಡ್ತಿದ್ದ. ಸದ್ಯ ಆತ ದೆಹಲಿಯ ಆರ್​ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾನೆ ಅಂತ ಬಾಲಕ ಹೇಳಿದ್ದಾನೆ ಅಂತ ಪೊಲೀಸರು ಹೇಳಿದ್ಧಾರೆ.

-masthmagaa.com

Contact Us for Advertisement

Leave a Reply