ಚೀನಾದಲ್ಲಿ ಜನವರಿ 22ಕ್ಕೆ ಹೊಸ ವರ್ಷ! ಕೊರೋನಾ ಸೋಂಕು ಹೆಚ್ಚಾಗುತ್ತೆ ಎಂದ ವಿಜ್ಞಾನಿಗಳು!

masthmagaa.com:

ಚೀನಾದ ಹಸಿವಿಗೆ ಹಾಂಗ್‌ಕಾಂಗ್‌ ಜನರ ಸ್ವಾತಂತ್ರ್ಯ ಆಹಾರವಾಗ್ತಿದೆ. ಹಾಂಗ್ ಕಾಂಗ್‌ನ ಸ್ವಾಯತ್ತತೆಯನ್ನ ಚೀನಾ ತಿಂದು ಹಾಕ್ತಾಯಿದೆ ಅಂತ ಬ್ರಿಟನ್‌, ಚೀನಾ ವಿರುದ್ದ ಮತ್ತೊಮ್ಮೆ ಕಿಡಿಕಾರಿದೆ. ಬ್ರಿಟನ್‌ನ ವಿದೇಶಾಂಗ ಕಾರ್ಯದರ್ಶಿ ಜೇಮ್ಸ್ ಕ್ಲೆವರ್ಲಿ ಈ ಬಗ್ಗೆ ಮಾತನಾಡಿದ್ದು, ಹಾಂಗ್ ಕಾಂಗ್‌ನ ಸ್ವಾಯತ್ತತೆ, ಸ್ವಾತಂತ್ರ ನಿರಂತರವಾಗಿ ಕ್ಷೀಣಿಸುತ್ತಿದೆ. ಹಾಂಗ್ ಕಾಂಗ್‌ ಜನರ ಜೀವನದ ಮೇಲೆ ಚೀನಾ ಸರ್ಕಾರ ಬಿಗಿಯಾದ ನಿರ್ಬಂಧಗಳನ್ನ ಹೇರ್ತಾಯಿದೆ.. ಎಲ್ಲಾ ರಂಗದಲ್ಲೂ, ಎಲ್ಲಾ ರೀತಿಯಲ್ಲೂ ಆ ಜನರ ಸ್ವಾತಂತ್ರ್ಯಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಅಂತ ಆರೋಪ ಮಾಡಿದ್ದಾರೆ. ಅಂದಹಾಗೆ ಹಾಂಗ್‌ ಕಾಂಗ್‌ ಈ ಮುಂಚೆ ಬ್ರಿಟನ್‌ನ ಕಂಟ್ರೋಲ್‌ನಲ್ಲಿತ್ತು. ಆ ಬಳಿಕ ಷರತ್ತಿನ ಮೇರೆಗೆ ಹಾಂಗ್‌ಕಾಂಗ್‌ನ್ನ ಚೀನಾಗೆ ಬಿಟ್ಟುಕೊಡಲಾಗಿತ್ತು. ಹಾಂಗ್‌ಕಾಂಗ್‌ನ್ನ ನಾವು ರಕ್ಷಣೆ ಮಾಡ್ತೀವಿ..ಅಲ್ಲಿರೋ ಪ್ರಜಾಫ್ರಭುತ್ವಕ್ಕೆ, ಸ್ವಾತಂತ್ರಕ್ಕೆ ಯಾವುದೇ ದಕ್ಕೆ ಬರೋದಿಲ್ಲ ಅಂತ ಆ ಪ್ರದೇಶವನ್ನ ಚೀನಾ ತನ್ನ ಕಂಟ್ರೋಲ್‌ಗೆ ತಗೊಂಡಿತ್ತು. ಆದ್ರೆ ಅದಾದ ಮೇಲೆ ಚೀನಾ ಸರ್ಕಾರ ಅಲ್ಲಿ ಓಪನ್‌ ಆಗೇ ಕಮ್ಯುನಿಸ್ಟ್‌ಅನ್ನ ಹೇರ್ತಾಯಿದ್ದು ಬ್ರಿಟನ್‌ ಈ ಬಗ್ಗೆ ತುಂಬಾ ಹಿಂದಿನಿಂದಲೂ ಕಳವಳವನ್ನ ವ್ಯಕ್ತಪಡಿಸ್ತಾಯಿದೆ. ಈಗ ಕೂಡ ಅದನ್ನೇ ಮಾಡಿದೆ. ಇನ್ನು ಮತ್ತೊಂದು ಕಡೆ ಚೀನಾದಲ್ಲಿ ಮುಂದಿನ 2-3 ತಿಂಗಳುಗಳಲ್ಲಿ ಕೊರೊನಾ ಸೋಂಕು ಉತ್ತುಂಗಕ್ಕೆ ತಲುಪಲಿದ್ದು, ಗ್ರಾಮೀಣ ಪ್ರದೇಶದಲ್ಲೇ ಹೆಚ್ಚು ಸೋಂಕು ಕಾಣಿಸಿಕೊಳ್ಳಲಿದೆ ಅಂತ ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ಜನವರಿ 22ಕ್ಕೆ ಚೀನಾದಲ್ಲಿ ಹೊಸ ವರ್ಷ ಇದೆ. ಹೀಗಾಗಿ ಕೋಟ್ಯಾಂತರ ಮಂದಿ ತಮ್ಮ ಊರುಗಳಿಗೆ ಹೋಗ್ತಿದ್ದಾರೆ. ಇದರಿಂದ ಚೀನಾದ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಳ್ಳಬಹುದು ಅಂತ ಅಂದಾಜಿಸಲಾಗಿದೆ.

-masthmagaa.com

Contact Us for Advertisement

Leave a Reply