ಆಗಸ್ಟ್​ ನಂತರ ಬ್ರಿಟನ್​ನಲ್ಲಿ ರೂಪಾಂತರಿ ವೈರಸ್ ಹರಡಲ್ವಾ?

masthmagaa.com:

ಆಗಸ್ಟ್​ ವೇಳೆಗೆ ಬ್ರಿಟನ್​ ಜನತೆ ಕೊರೋನಾದಿಂದ ಪ್ರೊಟೆಕ್ಟ್ ಆಗಿರ್ತಾರೆ. ಆಗಸ್ಟ್​ ವೇಳೆಗೆ ಬ್ರಿಟನ್​ನಲ್ಲಿ ಯಾವುದೇ ರೂಪಾಂರಿ ವೈರಸ್ ಕೂಡ ಹರಡುತ್ತಿರಲ್ಲ ಅಂತ ಬ್ರಿಟನ್​ ವ್ಯಾಕ್ಸಿನ್​ ಟಾಸ್ಕ್​ ಫೋರ್ಸ್​ನ ಮಾಜಿ ಮುಖ್ಯಸ್ಥ ಕ್ಲೈವ್ ಡಿಕ್ಸ್ ಹೇಳಿದ್ದಾರೆ. ಇವರು ಕಳೆದ ವಾರವಷ್ಟೇ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ರು. ತನ್ನ ಜನಸಂಖ್ಯೆಯ ಅರ್ಧಕ್ಕೂ ಹೆಚ್ಚು ಜನರಿಗೆ ಕೊರೋನಾ ಲಸಿಕೆಯ ಮೊದಲ ಡೋಸ್​ ಹಾಕಿದೆ ಬ್ರಿಟನ್. ಒಂದೂವರೆ ಕೋಟಿಗೂ ಹೆಚ್ಚು ಜನರಿಗೆ ಎರಡೂ ಡೋಸ್​ ಹಾಕಿದೆ. ಈ ಮೂಲಕ ಲಸಿಕೆ ಅಭಿಯಾನದಲ್ಲಿ ಬಹುತೇಕ ಯಶಸ್ಸು ಕಂಡಿದೆ. ಇದೇ ಆಧಾರದಲ್ಲಿ ಆಗಸ್ಟ್​ ವೇಳೆಗೆ ಬ್ರಿಟನ್​ನಲ್ಲಿ ರೂಪಾಂತರಿ ವೈರಸ್​ ಹರಡಲ್ಲ ಅಂತ ಕ್ಲೈವ್ ಡಿಕ್ಸ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply