ಬ್ರಿಟನ್​​ನಲ್ಲಿ ಪೆಟ್ರೋಲ್ ಪೂರೈಸಲಿದ್ದಾರೆ ಸೈನಿಕರು!

masthmagaa.com:

ಬ್ರಿಟನ್​​ನಲ್ಲಿ ಟ್ಯಾಂಕರ್ ಚಾಲಕರ ಕೊರತೆಯಿಂದಾಗಿ ತೈಲ ಪೂರೈಕೆಯಲ್ಲಿ ವತ್ಯಯವಾಗಿ, ಜನ ಪರದಾಡ್ತಿದ್ದಾರೆ. ಪೆಟ್ರೋಲ್ ಬಂಕ್​ಗಳು ಖಾಲಿ ಖಾಲಿಯಾಗಿವೆ. ಒಂದುವೇಳೆ ಸಮಸ್ಯೆ ಬಗೆಹರಿಯದೇ ಇದ್ರೆ ಸೈನಿಕರನ್ನು ಟ್ಯಾಂಕರ್​​ಗಳನ್ನು ಓಡಿಸಲು ನಿಯೋಜಿಸಲಾಗುತ್ತೆ. ಯೋಧರು ರೆಡಿ ಇದ್ದಾರೆ ಅಂತ ಸರ್ಕಾರ ತಿಳಿಸಿತ್ತು. ಇದೀಗ ಸೋಮವಾರದಿಂದ ಸೈನಿಕರು ತೈಲ ಪೂರೈಕೆಯಲ್ಲಿ ತೊಡಗಲಿದ್ದಾರೆ. 200 ಮಂದಿ ಮಿಲಿಟರಿ ಟ್ಯಾಂಕರ್ ಆಪರೇಟ್ ಮಾಡುವ ಸಿಬ್ಬಂದಿ ಈ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಅಂತ ಸರ್ಕಾರ ತಿಳಿಸಿದೆ.

-masthmagaa.com

Contact Us for Advertisement

Leave a Reply