ಬಜೆಟ್‌ ಕಾರುಗಳ ಖರೀದಿ ಕುಸಿತ; ಎಸ್‌ಯುವಿಗಳದ್ದೇ ಆರ್ಭಟ!

masthmagaa.com:

ಇಂಡಿಯಾದಲ್ಲಿ ಬೂಮ್‌ ಆಗ್ತಿರೋ ಆಟೋ ಇಂಡಸ್ಟ್ರಿ ಬೆಳವಣಿಗೆ ಬಗ್ಗೆ ಇನ್ನೊಂದು ರಿಪೋರ್ಟ್‌ ಬಂದಿದೆ. ಒಂದು ಟೈಮಲ್ಲಿ ಬಜೆಟ್‌ ಕಾರುಗಳನ್ನ ತಗೊಳ್ಳೋಕೆ ಮುಗಿಬೀಳ್ತಿದ್ದ ಜನ ಈಗ ಬೇರೆ ಸೆಗ್ಮೆಂಟ್‌ನ ಕಾರುಗಳ ಕಡೆ ಮುಖ ಮಾಡಿದ್ದಾರೆ. 5 ಲಕ್ಷದ ಒಳಗಿನ ಕಾರ್‌ಗಳನ್ನ ಖರೀದಿಸೋರ ಸಂಖ್ಯೆ, ಕಳೆದ 8 ವರ್ಷಗಳಲ್ಲಿ 34% ನಿಂದ ಕೇವಲ 0.3%ಗೆ ಕುಸಿದಿದೆ. ಬಜೆಟ್‌ ಕಾರ್‌ಗಳನ್ನ ತಗೊಬೇಕು ಅನ್ಕೊಂಡೋರು, ಒಂಚೂರು ಜಾಸ್ತಿ ಬಂಡವಾಳ ಹಾಕಿ ಪ್ರೀಮಿಯಂ ಹ್ಯಾಚ್‌ಬ್ಯಾಕ್‌, ಕಾಂಪ್ಯಾಕ್ಟ್‌ ಎಸ್‌ಯುವಿ ಕಡೆ ವಾಲಿದ್ದಾರೆ. ಕಂಪನಿಗಳೂ ಕೂಡ ತಮ್ಮ ದೊಡ್ಡ ಕಾರುಗಳ ಕಡೆ ಜಾಸ್ತಿ ಫೋಕಸ್‌ ಮಾಡ್ತಿದ್ದಾರೆ. ಅದೊಂದೇ ಕಾರಣ ಅಲ್ಲ, 5 ಲಕ್ಷಕ್ಕಿಂತ ಕಡಿಮೆ ಬೆಲೆ ಇದ್ದ ಕಾರುಗಳ ಬೆಲೆ, 65% ಜಾಸ್ತಿಯಾಗಿದ್ರೆ, ಎಸ್‌ಯುವಿಗಳ ಬೆಲೆಯಲ್ಲಿ ಸಣ್ಣ ಕಾರ್‌ಗಳ ಅರ್ಧಕ್ಕಿಂತ ಕಮ್ಮಿ, 24% ಅಷ್ಟೇ ಜಾಸ್ತಿಯಾಗಿದೆ. ಸೋ ಎಸ್‌ಯುವಿಗಳು, ಅಂದ್ರೆ ಕಾಂಪ್ಯಾಕ್ಟ್‌, ಸಬ್‌ 4 ಮೀಟರ್‌ ಎಸ್‌ಯುವಿಗಳು ಜನರನ್ನ ಆಕರ್ಷಣೆ ಮಾಡ್ತಿವೆ. 10 ಲಕ್ಷದ ಮೇಲಿನ ಕಾರ್ಗಳ ಮಾರ್ಕೆಟ್‌ ಷೇರ್‌ 2015ರ 12.5% ಮಾರ್ಕ್‌ನಿಂದ ಇದೀಗ 46%ಗೆ ತಲುಪಿದೆ.

-masthmagaa.com

Contact Us for Advertisement

Leave a Reply