ದೇಶದಲ್ಲಿ ಬುಲ್ಲಿ ಬಾಯ್ ಗಲಾಟೆ! ಏನಿದು ಬುಲ್ಲಿ ಬಾಯ್?

masthmagaa.com:

ಗಿಟ್​ಹಬ್​​​ ವೇದಿಕೆಯಲ್ಲಿ ಬುಲ್ಲಿ ಬಾಯ್ ಅನ್ನೋ ಆ್ಯಪ್​​​​​​​​ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದ್ರಲ್ಲಿ ಕೆಲ ಪ್ರಸಿದ್ಧ ಮುಸ್ಲಿಂ ಮಹಿಳೆಯರ ಫೋಟೋ ಅಪ್​ಲೋಡ್ ಮಾಡಲಾಗಿದ್ದು, ಕೆಳಗೆ ಪ್ರೈಸ್​ ಟ್ಯಾಗ್ ಹಾಕಲಾಗಿದೆ. ಜೊತೆಗೆ ಟ್ವಿಟ್ಟರ್​​​ನಲ್ಲೂ ಈ ಬಗ್ಗೆ ಪ್ರಮೋಟ್ ಮಾಡಲಾಗ್ತಿದ್ದು, ಈ ಆ್ಯಪ್ ಮೂಲಕ ಮಹಿಳೆಯರನ್ನು ಬುಕ್ ಮಾಡ್ಬೋದು ಅಂತ ಹೇಳಲಾಗಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಅದ್ರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್​​, ಸದ್ಯಕ್ಕೆ ಗಿಟ್​​ಹಬ್​​ನ ಈ ಬುಲ್ಲಿ ಬಾಯ್ ಆ್ಯಪ್​​ ಹಿಂದಿದ್ದ ಯೂಸರ್​ನ್ನು ಬ್ಲಾಕ್ ಮಾಡಲಾಗಿದೆ. ತನಿಖೆ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತೆ ಅಂತ ಹೇಳಿದ್ದಾರೆ. ಈ ಹಿಂದೆ ಜೂನ್ ತಿಂಗಳಲ್ಲಿ ಇದೇ ಗಿಟ್​​ಹಬ್​ ವೇದಿಕೆಯಲ್ಲಿ ಸುಲ್ಲಿ ಡೀಲ್ಸ್ ಅನ್ನೋ ಆ್ಯಪ್​​ನಲ್ಲೂ ಇದೇ ರೀತಿ ಮುಸ್ಲಿಂ ಮಹಿಳೆಯರ ಪೋಟೋ ಹಾಕಿ, ಬೆಲೆ ನಿಗದಿಪಡಿಸಲಾಗಿತ್ತು. ಡೀಲ್ ಆಫ್ ದಿ ಡೇ ಅಂತ ಟ್ವಿಟ್ಟರ್​ನಲ್ಲಿ ಶೇರ್ ಮಾಡಲಾಗಿತ್ತು. ಆಗಲೂ ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿ, ನಂತರ ಆ ಆ್ಯಪನ್ನ ಗಿಟ್​ಹಬ್​ನಿಂದ ತೆಗೆದು ಹಾಕಲಾಗಿತ್ತು. ಗಿಟ್ ಹಬ್ ಅನ್ನೋದು ಆ್ಯಪ್​​ಗಳನ್ನು ಶೇರ್ ಮಾಡಲು ಇರೋ ಒಂದು ವೇದಿಕೆ. ಆದ್ರೆ ಅದು ಇಂಥ ದುರುಳರಿಂದ ದುರ್ಬಳಕೆಯಾಗ್ತಿರೋದು ವಿಪರ್ಯಾಸದ ವಿಚಾರ.. ಇದ್ರ ಹಿಂದಿರೋ ಉದ್ದೇಶ ಬೇರೇನೂ ಅಲ್ಲ.. ಬೇರೆ ಧರ್ಮದ ಮಹಿಳೆಯರ ಹೆಸರು ಹಾಳು ಮಾಡೋದೇ ಇದ್ರ ಉದ್ದೇಶ ಅಂತ ಟೀಕೆ ವ್ಯಕ್ತವಾಗ್ತಿದೆ.

-masthmagaa.com

Contact Us for Advertisement

Leave a Reply