ಜಪಾನ್​​​​ನಲ್ಲಿ ವಿಶ್ವದ ಮೊದಲ ಡ್ಯುಯೆಲ್ ಮಾಡಲ್ ವೆಹಿಕಲ್! ಹೆಂಗಿದೆ ಗೊತ್ತಾ?

masthmagaa.com:

ಜಪಾನ್​​​​ನಲ್ಲಿ ವಿಶ್ವದ ಮೊದಲ ಡ್ಯುಯೆಲ್ ಮಾಡಲ್ ವೆಹಿಕಲ್ ಸೇವೆ ಶುರು ಮಾಡಲಾಗಿದೆ. ಉದ್ದವಾದ ಬಸ್​ ರೀತಿಯ ವೆಹಿಕಲ್ ಇದಾಗಿದ್ದು, ಬಸ್ ರೀತಿ ರಸ್ತೆ ಮೇಲೂ ಸಾಗುತ್ತೆ. ಅದೇ ರೀತಿ ಹಳಿಯ ಮೇಲೆ ರೈಲಿನ ರೀತಿಯಲ್ಲೂ ಸಾಗಲಿದೆ. ರಸ್ತೆ ಮೇಲೆ ಸಾಗುವಾಗ ರಬ್ಬರ್ ಟೈರ್​​​ ಕೆಲಸ ಮಾಡುತ್ತೆ. ಅದೇ ಹಳಿ ಮೇಲೆ ಹೋಗ್ತಿದ್ದಂತೆ ರಬ್ಬರ್ ಟೈರ್​​ ಬದಲು ಕಬ್ಬಿಣದ ಚಕ್ರಗಳು ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಅಸಕೋಸ್ಟ್​ ಅನ್ನೋ ರೈಲ್ವೆ ಕಂಪನಿ ಈ ಸೇವೆ ನೀಡ್ತಿದ್ದು, ಸಣ್ಣ ಸಣ್ಣ ನಗರಗಳ ಜನತೆಗೆ ಇದ್ರಿಂದ ಒಳ್ಳೆ ಲಾಭವಾಗಲಿದೆ ಅಂತ ಸಂಸ್ಥೆ ತಿಳಿಸಿದೆ.

-masthmagaa.com

Contact Us for Advertisement

Leave a Reply