ಕಾಂಬೋಡಿಯಾದಲ್ಲಿ 5 ಸಾವಿರ ಭಾರತೀಯರಿಂದ ಸೈಬರ್‌ ಕ್ರೈಮ್‌!

masthmagaa.com:

ಆಸಿಯಾನ್‌ ದೇಶ ಕಾಂಬೋಡಿಯಾದಲ್ಲಿ 5 ಸಾವಿರ ಭಾರತೀಯರು ಸೈಬರ್‌ ಕ್ರೈಂ ಜಾಲದಲ್ಲಿ ಟ್ರ್ಯಾಪ್‌ ಆಗಿರೋ ಶಾಕಿಂಗ್‌ ವಿಚಾರ ವರದಿಯಾಗಿದೆ. ಒತ್ತಾಯ ಪೂರ್ವಕವಾಗಿ ಈ ಜನರ ಕೈಯಲ್ಲಿ ಭಾರತದ ಜನರ ಮೇಲೆ ಸೈಬರ್‌ ಕ್ರೈಂಗಳನ್ನ ಮಾಡಿಸಲಾಗ್ತಿದೆ ಅಂತ ತಿಳಿದುಬಂದಿದೆ. ಇವರ ಕೈಲಿ ಕಳೆದ 6 ತಿಂಗಳುಗಳಿಂದ ಭಾರತದಲ್ಲಿರೋ ಜನರ ಮೇಲೆ ಸೈಬರ್‌ ದಾಳಿಗಳನ್ನ ಮಾಡಿಸಲಾಗಿದೆ. ಇದ್ರಲ್ಲಿ ಸುಮಾರು 500 ಕೋಟಿ ರೂಪಾಯಿ ವಂಚಿಸಲಾಗಿದೆ ಅಂತ ತಿಳಿದಿದೆ. ಅಲ್ಲದೆ ತನಿಖಾ ಸಂಸ್ಥೆಗಳ ಹೆಸರು ಹೇಳ್ಕೊಂಡು ಹಣ ಸುಲಿಗೆ ಮಾಡಿದ್ರು ಅಂತ ತಿಳಿದು ಬಂದಿದೆ. ಈ ವಿಚಾರವಾಗಿ ಕೇಂದ್ರ ಗೃಹ ಸಚಿವಾಲಯ, ಎಲೆಕ್ಟ್ರಾನಿಕ್ಸ್‌ ಹಾಗೂ IT ಸಚಿವಾಲಯ ಹಾಗೂ ಇಂಡಿಯನ್‌ ಸೈಬರ್‌ ಕ್ರೈಂ ಕೋಆರ್ಡಿನೇಷನ್‌ ಸೆಂಟರ್‌ ಮತ್ತು ಇತರ ಸೆಕ್ಯುರಿಟಿ ಎಕ್ಸ್‌ಪರ್ಟ್‌ಗಳು ಮೀಟಿಂಗ್‌ ನಡೆಸಿವೆ. ಅಲ್ಲದೆ ಕಾಂಬೊಡಿಯಾದಲ್ಲಿ ಸಿಲುಕಿರೋ ಭಾರತೀಯರನ್ನ ಬಿಡಿಸೋ ಬಗ್ಗೆ ಮಾತುಕತೆ ನಡೆಸಿವೆ ಎನ್ನಲಾಗಿದೆ. ಅಲ್ಲಿನ ಸಿಲುಕಿರೋ ಹೆಚ್ಚಿನ ಜನರು ದಕ್ಷಿಣ ಭಾರತದವರಾಗಿದ್ದು, ಡೇಟಾ ಎಂಟ್ರಿ ಕೆಲಸಕ್ಕೆ ಹೋದೋರನ್ನ ಸೈಬರ್‌ ಕ್ರೈಂ ಮಾಡೋಕೆ ಬಳಸಿಕೊಳ್ಳಲಾಗ್ತಿದೆ ಅಂತ ತಿಳಿದುಬಂದಿದೆ. ಕಳೆದ ಡಿಸೆಂಬರ್‌ನಲ್ಲಿ ಒಡಿಸ್ಸಾದ ರೂರ್ಕೆಲಾ ಪೊಲೀಸರು ಈ ಸೈಬರ್‌ ಕ್ರೈಂ ಸಿಂಡಿಕೇಟನ್ನ ಭೇದಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಮುಖ್ಯವಾಗಿ ಕೇಂದ್ರ ಸರ್ಕಾರಿ ಅಧಿಕಾರಿ ಒಬ್ರಿಗೆ 70 ಲಕ್ಷ ರೂಪಾಯಿ ವಂಚನೆ ಮಾಡಿದ ಕೇಸ್‌ನ ತನಿಖೆಯಲ್ಲಿ ಈ ಜಾಲ ಬಯಲಾಗಿತ್ತು. ಆ ವೇಳೆ ಭಾರತೀಯರನ್ನ ಕಾಂಬೋಡಿಯಾಗೆ ಕಳಿಸ್ತಿದ್ದ 8 ಮಂದಿಯನ್ನ ಅರೆಸ್ಟ್‌ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply