ಪಾಕಿಸ್ತಾನದಲ್ಲಿ ಮೀನು ಕದ್ದು ಸಿಕ್ಕಿಬಿದ್ದ ಚೀನಾ!

masthmagaa.com:

ಬೆರಳು ಕೊಟ್ಟ ಪಾಕಿಸ್ತಾನದ ಹಸ್ತವನ್ನೇ ನುಂಗುತ್ತಿದೆ ಡ್ರ್ಯಾಗನ್ ದೇಶ ಚೀನಾ.. ಇಷ್ಟು ಎಲ್ಲವನ್ನು ಸಹಿಸಿಕೊಂಡಿದ್ದ ಪಾಕ್​​​​ ಈಗ ಸಹನೆ ಕಳ್ಕೊಂಡಿದೆ. ಅದಕ್ಕೆ ಸಾಕ್ಷಿ ಗ್ವಾದರ್ ಬಂದರಿನಲ್ಲಿ ನಡೆದ ಘಟನೆ. ಗ್ವಾದರ್ ಬಂದರಿನ ಬಳಿ ಅರಬ್ಬೀ ಸಮುದ್ರದಲ್ಲಿ ಅಕ್ರಮವಾಗಿ ಮೀನು ಹಿಡಿಯುತ್ತಿದ್ದ ಚೀನಾದ 5 ಹಡಗುಗಳನ್ನು ಪಾಕಿಸ್ತಾನ ಜಪ್ತಿ ಮಾಡಿದೆ. ಅಂದಹಾಗೆ ಈ ಬಂದರನ್ನು 40 ವರ್ಷಗಳಿಗೆ ಪಾಕಿಸ್ತಾನ ಚೀನಾಗೆ ಅಂದ್ರೆ ಚೀನಾದ ಸರ್ಕಾರಿ ಮಾಲೀಕತ್ವದ ಚೈನೀಸ್ ಓವರ್​ಸೀಸ್​ ಪೋರ್ಟ್​​ ಹೋರ್ಡಿಂಗ್ ಕಂಪನಿಗೆ ಲೀಸ್​​ಗೆ ನೀಡಿದೆ. ಇದನ್ನು ಚೀನಾ ಪಾಕಿಸ್ತಾನ ಎಕನಾಮಿಕ್ ಕಾರಿಡಾರ್​​ನ ಮುಖ್ಯದ್ವಾರ ಅಂತಲೇ ಕರೆಯಲಾಗುತ್ತೆ. ಆದ್ರೆ ಇದೇ ನೆಪದಲ್ಲಿ ಚೀನೀಯರು ಸಿಕ್ಕಷ್ಟು ದೋಚ್ಕೊಳ್ಳೋಣ ಅನ್ನೋ ಮನಸ್ಥಿತಿಯಲ್ಲಿ ಇದ್ದಂತಿದೆ. ಪಾಕಿಸ್ತಾನದ ವಿಶೇಷ ಆರ್ಥಿಕ ವಲಯದಲ್ಲಿ ಹಲವು ವಾರಗಳಿಂದ ಚೀನೀ ಹಡಗುಗಳು ಮೀನು ಹಿಡಿಯುತ್ತಿದ್ವು. ಈ ಬಗ್ಗೆ ಮೀನುಗಾರರ ಸಮೂಹ ದೊಡ್ಡಮಟ್ಟದಲ್ಲಿ ಮೆರವಣಿಗೆ ನಡೆಸಿ, ಪ್ರತಿಭಟಿಸಿದ್ವು. ಅದ್ರ ಬೆನ್ನಲ್ಲೇ ಈಗ ಪಾಕ್ ಅಧಿಕಾರಿಗಳು ಚೀನೀ ಹಡಗುಗಳನ್ನು ಸೀಜ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply